ಗಸಗಸೆ ಹೋಳಿಗೆ ರುಚಿಕರವಾದ ಗಸಗಸೆ ಹೋಳಿಗೆ ಮಾಡುವ ವಿಧಾನ... ಬೇಕಾಗುವ ಪದಾರ್ಥಗಳು...ಗಸಗಸೆ-1 ಬಟ್ಟಲುಒಣ ಕೊಬ್ಬರಿ ತುರಿ- 1 ಬಟ್ಟಲುಬೆಲ್ಲ-3/4 ಬಟ್ಟಲುಎಲಕ್ಕಿ ಪುಡಿ-ಸ್ವಲ್ಪಪೇಣಿ ರವೆ- 1/2 ಬಟ್ಟಲುಗೋಧಿಹಿಟ್ಟು-1/2 ಬಟ್ಟಲುಉಪ್ಪು- ಚಿಟಿಕೆಅರಿಶಿನ-ಸ್ವಲ್ಪಎಣ್ಣೆ- ಅಗತ್ಯಕ್ಕೆ ತಕ್ಕಷ್ಟುಮಾಡುವ ವಿಧಾನ...ಗಸಗಸೆ, ಕೊಬ್ಬರಿ ತುರಿ ಎರಡನ್ನು ನುಣ್ಣಗೆ ಪುಡಿ ಮಾಡಿಕೊಂಡು, ದಪ್ಪ ತಳದ ಪಾತ್ರ‍್ರೆಗೆ ಹಾಕಿ ಬೆಲ್ಲ ಎಲ್ಲಕ್ಕಿ ಪುಡಿ ಹಾಕಿ ನೀರು ಎರಡು ಚಮಚ ಹಾಕಿ ಒಲೆಯ ಮೇಲೆ ಇಟ್ಟು ಮಗುಚಿ ಗಟ್ಟಿಯಾದ ನಂತರ ಇಳಿಸಿ ಹೂರಣ ರೆಡಿ.ಪೇಣಿರವೆ, ಗೋಧಿ ಹಿಟ್ಟು, ಸ್ವಲ್ಪ ಉಪ್ಪು, ಅರಿಶಿನ ಹಾಕಿ ಸ್ವಲ್ಪ ನೀರು ಹಾಕಿ ಚಪಾತಿ ಹಿಟ್ಟಿನಂತೆ ಕಲೆಸಿ ಮೂರು ಚಮಚ ಎಣ್ಣೆಹಾಕಿ ನಾದಿ ಎರಡು ಗಂಟೆಕಾಲ ನೆನೆಯಲು ಬಿಡಿ.ಕಣಕವನ್ನು ಕೈಯಲ್ಲಿ ತೆಗೆದುಕೊಂಡು ಅಗಲ ಮಾಡಿ ಹೂರಣದ ಉಂಡೆ ಇಟ್ಟು ಮುಚ್ಚಿ ಹೋಳಿಗೆ ಶೀಟಿಗೆ ಎಣ್ಣೆ ಹಚ್ಚಿಕೊಂಡು ತುಂಬಿದ ಉಂಡೆ ಇಟ್ಟು ಲಟ್ಟಿಸಿ ಕಾದ ತವಾದ ಮೇಲೆ ಹಾಕಿ ಸಣ್ಣ ಉರಿಯಲ್ಲಿ ಎರಡೂ ಬದಿಯಲ್ಲಿ ಬೇಯಿಸಿದರೆ ರುಚಿಕರವಾದ ಗಸಗಸೆ ಹೋಳಿಗೆ ಸವಿಯಲು ಸಿದ್ಧ.