ಸ್ಪೆಷಲ್ ಶರಬತ್ ರುಚಿಕರವಾದ ಸ್ಪೆಷಲ್ ಶರಬತ್ ಮಾಡುವ ವಿಧಾನ... ಬೇಕಾಗುವ ಪದಾರ್ಥಗಳುಸಕ್ಕರೆ- 1 ಬಟ್ಟಲುಕಸ್ಟರ್ಡ್ ಪೌಡರ್- ಅರ್ಧ ಬಟ್ಟಲುಹಾಲಿನ ಪೌಡರ್- ಮುಕ್ಕಾಲು ಬಟ್ಟಲುಹಾಲು- ಅರ್ಧ ಲೀಟರ್ಬಾದಾಮಿ - 2 ಹಿಡಿಯಷ್ಟುಗೋಡಂಬಿ- 1 ಹಿಡಿಯಷ್ಟುವಾಲ್ನಟ್-ಸ್ವಲ್ಪಪಿಸ್ತಾ-ಸ್ವಲ್ಪಏಲಕ್ಕಿ- ಸ್ವಲ್ಪಕೇಸರಿ ದಳ- ಸ್ವಲ್ಪಮಾಡುವ ವಿಧಾನ...ಮೊದಲಿಗೆ ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಸಕ್ಕರೆ, ಕಸ್ಟರ್ಡ್ ಪೌಡರ್, ಮಿಲ್ಕ್ ಪೌಡರ್, ಬಾದಾಮಿ, ಗೋಜಂಬಿ, ವಾಲ್ನಟ್ ಹಾಗೂ ಏಲಕ್ಕಿ ಹಾಕಿ ಪುಡಿ ಮಾಡಿಕೊಳ್ಳಿ. ಈ ಪುಡಿಯನ್ನು ಗಾಳಿಯಾಡದ ಡಬ್ಬಿಗೆ ಹಾಕಿ ಎತ್ತಿಟ್ಟುಕೊಂಡು, ಬೇಕೆನಿಸಿದಾಗ ಶರಬತ್ತು ಮಾಡಿಕೊಳ್ಳಬಹುದು.ಇದೀಗ ಒಲೆಯ ಮೇಲೆ ಪಾತ್ರೆ ಇಟ್ಟು, ಪಾತ್ರೆಗೆ ಹಾಲು ಹಾಕಿ ಗಟ್ಟಿಯಾಗುವವರೆಗೆ ಕಾಯಿಸಿ. ಬಳಿಕ ಅಗತ್ಯವೆನಿಸಿದಷ್ಟು ಪುಡಿಯನ್ನು ಹಾಕಿ. 2 ನಿಮಿಷ ಕುದಿಸಿ. ನಂತರ ಕೇಸರಿ ದಳ ಹಾಗೂ ಪಿಸ್ತಾ ಹಾಗೂ ಬಾದಾಮಿ ಚೂರುಗಳನ್ನು ಹಾಕಿ, ಮಿಶ್ರಣ ಮಾಡಿ. ಬಳಿಕ ಇದು ತಣ್ಣಗಾಗಲು ಫ್ರಿಡ್ಜ್ ನಲ್ಲಿಡಿ. ಇದೀಗ ಸ್ಪೆಷಲ್ ಶರಬತ್ ಸವಿಯಲು ಸಿದ್ಧ. ಇಷ್ಟಪಡುವುದಾದರೆ ಟೂಟಿ ಫ್ರೂಟಿಯನ್ನು ಕೂಡ ಹಾಕಿಕೊಳ್ಳಬಹುದು. ಇದು ರುಚಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ.