ಯುಗಾದಿ ಸ್ಪೆಷಲ್ ಮಾವಿನಕಾಯಿ ಚಿತ್ರಾನ್ನ ರುಚಿಕರವಾದ ಮಾವಿನಕಾಯಿ ಚಿತ್ರಾನ್ನ ಮಾಡುವ ವಿಧಾನ... ಬೇಕಾಗುವ ಪದಾರ್ಥಗಳು...ಮಾವಿನಕಾಯಿ – 1 (ತುರಿದಿಟ್ಟುಕೊಂಡದ್ದು)ಎಣ್ಣೆ – 5-6 ಚಮಚಹಸಿಮೆಣಸಿನಕಾಯಿ – 4-5ಕಡಲೆಕಾಯಿ ಬೀಜ – 4 ಚಮಚಕೊತ್ತಂಬರಿ ಸೊಪ್ಪು – ಸ್ವಲ್ಪಕರಿಬೇವಿನ ಸೊಪ್ಪು – ಸ್ವಲ್ಪಸಾಸಿವೆ – ಅಗತ್ಯಕ್ಕೆ ತಕ್ಕಷ್ಟುಅರಿಶಿನ ಪುಡಿ – ಅಗತ್ಯಕ್ಕೆ ತಕ್ಕಷ್ಟುಜೀರಿಗೆ -1 ಚಮಚಕಡ್ಲೆಬೇಳೆ -2 ಚಮಚಉದ್ದಿನಬೇಳೆ – 2 ಚಮಚಉಪ್ಪು- ರುಚಿಗೆ ತಕ್ಕಷ್ಟುಅನ್ನ- ಒಂದು ಬಟ್ಟಲುಮಾಡುವ ವಿಧಾನ...ಮೊದಲಿಗೆ ಬಾಣಲೆಗೆ 4 ಚಮಚ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದ ಮೇಲೆ ಸಾಸಿವೆ ಹಾಕಿ ಸಿಡಿಸಿ. ಬಳಿಕ ಅದಕ್ಕೆ ಜೀರಿಗೆ, ಕಡ್ಲೆಬೇಳೆ, ಉದ್ದಿನಬೇಳೆಯನ್ನೂ ಸೇರಿಸಿ ಹೊಂಬಣ್ಣ ಬರುವವರೆಗೆ ಹುರಿದುಕೊಳ್ಳಿ.ಈಗ ಇದಕ್ಕೆ ಸಣ್ಣಗೆ ಹೆಚ್ಚಿಟ್ಟುಕೊಂಡ ಹಸಿ ಮೆಣಸಿನಕಾಯಿ, ಕರಿಬೇವಿನ ಸೊಪ್ಪು ಹಾಕಿ ಬಾಡಿಸಿಕೊಳ್ಳಿ. ಉಪ್ಪು ಸೇರಿಸಿ ತುರಿದಿಟ್ಟ ಮಾವಿನಕಾಯಿಯನ್ನು ಹಾಕಿ 1 ನಿಮಿಷಗಳ ಕಾಲ ಬಿಸಿ ಮಾಡಿಕೊಳ್ಳಿ.ನಂತರ ಅರಿಶಿನ ಪುಡಿ ಸೇರಿಸಿಕೊಂಡು ಚನ್ನಾಗಿ ಮಿಶ್ರಮ ಮಾಡಿ, ಗ್ಯಾಸ್ ಆಫ್ ಮಾಡಿ.ಈಗ ಚಿಕ್ಕ ಕಡಾಯಿಯಲ್ಲಿ 1 ಚಮಚ ಎಣ್ಣೆ ಹಾಕಿಕೊಂಡು ಕಡ್ಲೆಬೀಜಗಳನ್ನು ಬಣ್ಣ ಬದಲಾಗುವ ತನಕ ಹುರಿದುಕೊಂಡು ಬಾಣಲೆಗೆ ಸೇರಿಸಿಕೊಂಡು ಸಣ್ಣಗೆ ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪನ್ನು ಸೇರಿಸಿ.ನಂತರ ಅನ್ನವನ್ನು ಈ ಮಿಶ್ರಣಕ್ಕೆ ಸೇರಿಸಿಕೊಂಡು ಚೆನ್ನಾಗಿ ಮಿಶ್ರ ಮಾಡಿದರೆ ರುಚಿಕರವಾದ ಮಾವಿನಕಾಯಿ ಚಿತ್ರಾನ್ನ ಸವಿಯಲು ಸಿದ್ಧ.