ಈರುಳ್ಳಿ ಪಕೋಡಾ ಸಾಯಂಕಾಲದ ಮಳೆ, ಬಿಸಿ ಕಾಫಿ ಜೊತೆಗೆ ಬಿಸಿಬಿಸಿಯಾದ ಈರುಳ್ಳಿ ಪಕೋಡಾ. ಮಕ್ಕಳಿಗೆ ವಯಸ್ಸಾದವರಿಗೆ ತುಂಬಾ ಅಚ್ಚು ಮೆಚ್ಚು. ಸಾಯಂಕಾಲದ ಮಳೆ, ಬಿಸಿ ಕಾಫಿ ಜೊತೆಗೆ ಬಿಸಿಬಿಸಿಯಾದ ಈರುಳ್ಳಿ ಪಕೋಡಾ. ಮಕ್ಕಳಿಗೆ ವಯಸ್ಸಾದವರಿಗೆ ತುಂಬಾ ಅಚ್ಚು ಮೆಚ್ಚು. ಅಂಗಡಿಯಿಂದ ತರುವ ಬದಲು ಮನೆಯಲ್ಲೇ ರುಚಿಯಾಗಿ, ಶುಚಿಯಾಗಿ ಮಾಡಿ ತಿನ್ನುವುದು ಉತ್ತಮ. ಬೇಕಾಗುವ ಪದಾರ್ಥಗಳುಮಾಡುವ ವಿಧಾನಮೊದಲಿಗೆ ಈರುಳ್ಳಿಯನ್ನು ಉದ್ದವಾಗಿ ಕತ್ತರಿಸಿಕೊಳ್ಳಿ. ಒಂದು ಪಾತ್ರೆಗೆ ಕಡ್ಲೆಹಿಟ್ಟು, ಕತ್ತರಿಸಿದ ಈರುಳ್ಳಿ, ಅಚ್ಚಖಾರದಪುಡಿ, ಸೋಡಾ, ಉಪ್ಪು, ಹೆಚ್ಚಿದ ಕರಿಬೇವಿನ ಸೊಪ್ಪು, ಪುದಿನ, ಕೊತ್ತಂಬರಿ ಸೊಪ್ಪುಕಾಯಿಸಿದ ಎಣ್ಣೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಗಟ್ಟಿಯಾಗಿ ಕಲೆಸಿಕೊಳ್ಳಿ. ಬೇಕಿದ್ದರೆ ಸ್ವಲ್ಪ ನೀರು ಸೇರಿಸಿಕೊಳ್ಳಿ. ಈಗ ಕಲಸಿಟ್ಟ ಮಿಶ್ರಣವನ್ನು ಕಾದ ಎಣ್ಣೆಯಲ್ಲಿ ಕೈಯಲ್ಲಿ ಅಥವಾ ಸ್ಪೂನ್ ನಿಂದ ಹಾಕಿ ಕರಿಯಿರಿ. ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೂ ಕರೆದು ಪೆಪರ್ ಟವೆಲ್ ಮೇಲೆ ಹಾಕಿ. ಬಳಿಕ ಪ್ಲೇಟ್ ಗೆ ಹಾಕಿ ಸರ್ವ್ ಮಾಡಿದರೆ ಗರಿಗರಿಯಾದ ಈರುಳ್ಳಿ ಪಕೋಡ ಸವಿಯಲು ಸಿದ್ಧ.