ಮೆಂತ್ಯೆ ಗೊಜ್ಜು- ರುಚಿಕರ ಹಾಗೂ ಆರೋಗ್ಯಕವಾದ ಮೆಂತ್ಯೆ ಗೊಜ್ಜು ಮಾಡುವ ವಿಧಾನ... ಬೇಕಾಗುವ ಪದಾರ್ಥಗಳು...ಎಳ್ಳು- 2 ಚಮಚಜೀರಿಗೆ- 1 ಚಮಚಒಣ ಕೊಬ್ಬರಿ - ಕಾಲು ಬಟ್ಟಲುಒಣಮೆಣಸು- 5-6ದನಿಯಾ- 1 ಚಮಚಸಾಸಿವೆ- ಸ್ವಲ್ಪಇಂಗು- ಸ್ವಲ್ಪಕರಿಬೇವು-ಸ್ವಲ್ಪಈರುಳ್ಳಿ- 1ಅರಿಶಿನ- ಸ್ವಲ್ಪಉಪ್ಪು-ರುಚಿಗೆ ತಕ್ಕಷ್ಟುಮೊಳಕೆ ಬರಿಸಿದ ಮೆಂತ್ಯೆ ಕಾಳು- 1 ಬಟ್ಟಲುಹುಣಸೆ ಹಣ್ಣಿನ ರಸ-ಸ್ವಲ್ಪಬೆಲ್ಲ-ಸ್ವಲ್ಪಮಾಡುವ ವಿಧಾನ...ಒಣ ಬಾಣಲಿಗೆ ಎಳ್ಳು, ಜೀರಿಗೆ, ಕಾಲು ಬಟ್ಟಲು ಒಣ ಕೊಬ್ಬರಿ, ಒಣಮೆಣಸು, ದನಿಯಾವನ್ನು ಹಾಕಿ ಕೆಂಪಗೆ ಹುರಿದುಕೊಳ್ಳಬೇಕು. ಇದು ತಣ್ಣಗಾದ ಮೇಲೆ ಎಲ್ಲವನ್ನೂ ಹಾಕಿ ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಬೇಕು.ನಂತರ ಬಾಣಲಿಗೆ 2 ಚಮಚ ಎಣ್ಣೆ ಹಾಕಿಕೊಂಡು ಅದಕ್ಕೆ ಮೊಳಕೆ ಬರಿಸಿದ ಮೆಂತ್ಯೆ ಕಾಳನ್ನು ಹಾಕಿ ಸಾಧಾರಣ ಉರಿಯಲ್ಲಿ ಸ್ವಲ್ಪ ಹೊತ್ತು ಹುರಿದುಕೊಂಡು ಅದನ್ನು ಒಂದು ಬಟ್ಟಲಿನಲ್ಲಿ ತೆಗೆದಿಟ್ಟುಕೊಳ್ಳಿ.ನಂತರ ಅದೇ ಬಾಣಲಿಗೆ 2–3 ಚಮಚ ಎಣ್ಣೆಗೆ ಸಾಸಿವೆ, ಜೀರಿಗೆ, ಸ್ವಲ್ಪ ಇಂಗು, ಕರಿಬೇವು ಹಾಕಿ. ನಂತರ ಇದಕ್ಕೆ ಸಣ್ಣ ಕತ್ತರಿಸಿದ 1 ಈರುಳ್ಳಿ ಹಾಕು ಅರಿಶಿನ ಹಾಕಿ ಸ್ವಲ್ಪ ಹುರಿದುಕೊಂಡು ಅದಕ್ಕೆ ಹುರಿದಿಟ್ಟುಕೊಂಡಿದ್ದ ಮೆಂತ್ಯೆ ಕಾಳನ್ನು ಹಾಕಿ,ಉಪ್ಪು, 2 ಚಮಚದಷ್ಟು ಬೆಲ್ಲ, ನಿಂಬೆಹಣ್ಣಿನಗಾತ್ರದ ಹುಣಸೆಹಣ್ಣಿನ ರಸ ಬೆರೆಸಿ ಸ್ವಲ್ವ ಹುರಿದುಕೊಂಡ ನಂತರ 1 ಕಪ್ ನೀರು ಬೆರೆಸಿ ಕಾಳು ಮೆತ್ತಗೆ ಬೇಯಿಸಿಕೊಳ್ಳಿ. ನಂತರ ಇದಕ್ಕೆ ಮಿಕ್ಸಿ ಮಾಡಿಟ್ಟುಕೊಂಡ ಮಸಾಲವನ್ನು ಬೆರೆಸಿ, ಅಗತ್ಯಕ್ಕೆ ತಕ್ಕಷ್ಟು ನೀರು ಬೆರೆಸಿ ಚೆನ್ನಾಗಿ ಕುದಿಸಿದರೆ ಗೊಜ್ಜು ಸಿದ್ಧ. ಈ ಗೊಜ್ಜನ್ನು ಮುದ್ದೆ, ಚಪಾತಿ, ರೊಟ್ಟಿ, ಅನ್ನದೊಂದಿಗೆ ಸವಿಯಬಹುದು.