ಸಿಹಿ ಪೇಡ - ರುಚಿಕರವಾದ ಸಿಹಿ ಪೇಡ ಮಾಡುವ ವಿಧಾನ... ಬೇಕಾಗುವ ಪದಾರ್ಥಗಳು...ಹಾಲಿನ ಪುಡಿ- 1 ಬಟ್ಟಲುಸಕ್ಕರೆ ಪುಡಿ- 3/4 ಬಚ್ಚಲುತುಪ್ಪ- 2 ಚಮಚಹಾಲು - 1/2 ಬಟ್ಟಲುಏಲಕ್ಕಿ ಪುಡಿ- ಸ್ವಲ್ಪಮಾಡುವ ವಿಧಾನ...ಮೊದಲು ಒಂದು ಪ್ಯಾನ್ ನಲ್ಲಿ 1 ಚಮಚ ತುಪ್ಪ ಹಾಕಿ ಕರಗಿಸಿ ನಂತರ ಹಾಲು ಸಕ್ಕರೆ ಪುಡಿ ಹಾಕಿ. ಸಕ್ಕರೆ ಕರಗಿದ ಮೇಲೆ ಹಾಲಿನ ಪುಡಿ, ಏಲಕ್ಕಿ ಪುಡಿ ಉದುರಿಸಿ ಚೆನ್ನಾಗಿ ಗಂಟಾಗದ ಹಾಗೆ ಕೈಯಾಡಿಸಿ.ಮತ್ತೊಂದು ಚಮಚ ತುಪ್ಪ ಹಾಕಿ ತಳ ಬಿಡುವವರೆಗೂ ಮಿಶ್ರಣ ಮಾಡುತ್ತಲೇ ಇರಿ. ನಂತರ ಗ್ಯಾಸ್ ಆಫ್ ಮಾಡಿ ತಣ್ಣಗಾಗಲು ಬಿಡಿ. ಕೈಗೆ ತುಪ್ಪ ಸವರಿಕೊಂಡು ಚಿಕ್ಕ ಚಿಕ್ಕ ಉಂಡೆ ಮಾಡಿ ಪೇಡ ಬೇಕಾದ ಆಕಾರದಲ್ಲಿ ಸಿದ್ಧ ಪಡಿಸಿದರೆ ರುಚಿಯಾದ ಪೇಡ ಸವಿಯಲು ಸಿದ್ಧ.