ಹೆಲ್ತ್ ಡ್ರಿಂಕ್ ಪೌಡರ್- ರುಚಿಕರ ಹಾಗೂ ಆರೋಗ್ಯಕರವಾದ ಹೆಲ್ತ್ ಡ್ರಿಂಕ್ ಪೌಡರ್ ಮನೆಯಲ್ಲೇ ಮಾಡುವ ವಿಧಾನ... ಬೇಕಾಗುವ ಪದಾರ್ಥಗಳುಬಾದಾಮಿ- 1 ಬಟ್ಟಲುಓಟ್ಸ್- 1 ಬಟ್ಟಲುಕಡಲೆಕಾಯಿ ಬೀಜ- 1 ಬಟ್ಟಲುಮಖಾನಾ- 1 ಬಟ್ಟಲುಕುಂಬಳಕಾಯಿ ಬೀಜ- 1 ಬಟ್ಟಲುಗೋಡಂಬಿ- ಸ್ವಲ್ಪಕೋಕೋ ಪೌಡರ್ - 3-4 ಚಮಚಮಾಡುವ ವಿಧಾನ...ಒಲೆಯ ಮೇಲೆ ಬಾಣಲೆ ಇಟ್ಟು ಕೋಕೋ ಪೌಡರ್ ಬಿಟ್ಟು ಮೇಲಿನ ಎಲ್ಲಾ ಪದಾರ್ಥಗಳನ್ನೂ ಒಂದೊಂದಾಗಿ ಪ್ರತ್ಯೇಕವಾಗಿ ಸಣ್ಣ ಉರಿಯಲ್ಲಿ ಕೆಂಪಗೆ ಹುರಿದುಕೊಳ್ಳಿ.ಇದು ತಣ್ಣಗಾದ ಬಳಿಕ ಮಿಕ್ಸಿ ಜಾರ್'ಗೆ ಹಾಕಿ ಪುಡಿ ಮಾಡಿ. ಈ ಪುಡಿಗೆ ಕೋಕೋ ಪೌಡರ್ ಹಾಕಿ ಮಿಶ್ರಮ ಮಾಡಿ. ಗಾಳಿಯಾಡದ ಡಬ್ಬಿಗೆ ಹಾಕಿಟ್ಟುಕೊಳ್ಳಿ.ಮಕ್ಕಳಿಗೆ ಕೊಡುವಾ ಬಿಸಿ ಹಾಲಿಗೆ 1 ಚಮಚ ಬೆಲ್ಲದ ಪುಡಿ ಅಥವಾ ಕಲ್ಲು ಸಕ್ಕರೆ ಹಾಗೂ ಈಗಾಗಲೇ ಮಾಡಿಟ್ಟುಕೊಂಡ ಹೆಲ್ತ್ ಡ್ರಿಂಕ್ ಪೌಡರ್ ನ್ನು ಒಂದು ಚಮಚ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಕೊಡಿ.ಈ ಹೆಲ್ತ್ ಡ್ರಿಂಕ್ಸ್ ಮಕ್ಕಳ ತೂಕವನ್ನು ಹೆಚ್ಚಿಸುವುದಲ್ಲದೆ, ಮೂಳೆ ಬಲವಾಗಿರವಂತೆ ಹಾಗೂ ಆರೋಗ್ಯವೂ ಉತ್ತಮವಾಗಿರುವಂತೆ ಮಾಡುತ್ತದೆ.