ಸಿಹಿ ಕುಂಬಳಕಾಯಿ ಸೂಪ್ ಸಿಹಿ ಕುಂಬಳಕಾಯಿ ಸೂಪ್ ಮಾಡುವ ವಿಧಾನ. ಸಿಹಿ ಕುಂಬಳಕಾಯಿ ಸೂಪ್ಬೇಕಾಗುವ ಪದಾರ್ಥಗಳು ಸಿಹಿ ಕುಂಬಳಕಾಯಿ -250 ಗ್ರಾಂ ತೆಂಗಿನ ಕಾಯಿ ಹಾಲು - 1/2 ಕಪ್ ಬೇಯಿಸಿದ ಜೋಳ- 50 ಗ್ರಾಂ ತೆಳುವಾಗಿ ಕತ್ತರಿಸಿದ ಹಸಿ ಹಸಿರು ಕ್ಯಾಪ್ಸಿಕಂ ಅಲಂಕಾರಕ್ಕೆ-50 ಗ್ರಾಂಮಾಡುವ ವಿಧಾನ 1 ಕಪ್ ನೀರು ಸೇರಿಸಿ ಸಿಹಿ ಕುಂಬಳಕಾಯಿಯನ್ನು ಚೆನ್ನಾಗಿ ಬೇಯಿಸಿ, ಸಿಪ್ಪೆ ತೆಗೆಯುವ ಅಗತ್ಯವಿಲ್ಲ. ನಂತರ ಸಿಹಿ ಕುಂಬಳಕಾಯಿಯನ್ನು ಹೊರತೆಗೆದು ತಣ್ಣಗಾಗಲು ಬಿಡಿ. ನುಣ್ಣಗೆ ರುಬ್ಬಿಕೊಳ್ಳಿ.ಬಾಣಲೆಯಲ್ಲಿ 1 ಕಪ್ ನೀರು ಹಾಕಿ ಕುದಿಸಿ. ಅದು ಕುದಿಯಲು ಪ್ರಾರಂಭವಾದ ನಂತರ, ಗ್ಯಾಸ್ ಆಫ್ ಮಾಡಿ, ತೆಂಗಿನಕಾಯಿ ಹಾಲು ಸೇರಿಸಿ ಚೆನ್ನಾಗಿ ಬೆರೆಸಿ ಸ್ವಲ್ಪ ಕುದಿಸಿ ಉಪ್ಪು ಹಾಕಿ ಮುಚ್ಚಿಡಿ. ಇದನ್ನು ತೆಳುವಾಗಿ ಕತ್ತರಿಸಿದ ಕ್ಯಾಪ್ಸಿಕಂ ಮತ್ತು ಬೇಯಿಸಿದ ಜೋಳದಿಂದ ಅಲಂಕರಿಸಿ ಬಿಸಿ ಇರುವಾಗಲೆ ಸೇವಿಸಿ.