ಚೀಸ್ ಕಬಾಬ್‌ ರುಚಿಕರವಾದ ಚೀಸ್ ಕಬಾಬ್‌ ಮಾಡುವ ವಿಧಾನ... ಬೇಕಾಗುವ ಪದಾರ್ಥಗಳು...ಮೊಝ್ಝಾರೆಲ್ಲಾ ಚೀಸ್- 100 ಗ್ರಾಂ (1 ಇಂಚಿನ ತುಂಡುಗಳಾಗಿ ಕತ್ತರಿಸಿದ್ದು)ಚಿಕನ್ - 300 ಗ್ರಾಂ (ಕೀಮಾ ರೀತಿ ಕತ್ತರಿಸಿಕೊಂಡಿದ್ದು)ಒತ್ತು ಶಾವಿಗೆ- 150 ಗ್ರಾಂಶುಂಠಿ-ಬೆಳ್ಳುಳ್ಳಿ- ಸಣ್ಣಗೆ ಕತ್ತರಿಸಿದ್ದು 1 ಚಮಚಹಸಿರು ಮೆಣಸಿನಕಾಯಿ ಪೇಸ್ಟ್- 1 ಚಮಚಪುದೀನಾ- ಸ್ವಲ್ಪ (ಸಣ್ಣಗೆ ಕತ್ತರಿಸಿದ್ದು)ಈರುಳ್ಳಿ- ಸಣ್ಣಗೆ ಕತ್ತರಿಸಿದ್ದು 1ಅಚ್ಚ ಖಾರದ ಪುಡಿ- ಅರ್ಧ ಚಮಚಗರಂ ಮಸಾಲಾ- ಅರ್ಧ ಚಮಚಮೊಟ್ಟೆ- 1ವಿಧಾನ ವಿಧಾನ...ಒಂದು ಬಟ್ಟಲಿನಲ್ಲಿ ಕತ್ತರಿಸಿದ ಕೋಳಿ ಮಾಂಸವನ್ನು ತೆಗೆದುಕೊಂಡು, ಶುಂಠಿ, ಬೆಳ್ಳುಳ್ಳಿ, ಹಸಿರು ಮೆಣಸಿನಕಾಯಿಗಳು, ಪುದೀನ ಮತ್ತು ಈರುಳ್ಳಿ, ಉಪ್ಪು, ಕೆಂಪು ಮೆಣಸಿನ ಪುಡಿ, ಗರಂ ಮಸಾಲಾ ಪುಡಿ ಹಾಗೂ ಮೊಟ್ಟೆ ಹಳದಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ, 10-15 ನಿಮಿಷಗಳ ಕಾಲ ನೆನೆಯಲು ಬಿಡಿ.ಶಾವಿಗೆಯನ್ನು ತರಿತರಿಯಾಗಿ ಪುಡಿಮಾಡಿ, ತಟ್ಟೆಗೆ ಹಾಕಿಟ್ಟುಕೊಳ್ಳಿ. ಸ್ಟೀಮರ್‌ ಪಾತ್ರೆಯಲ್ಲಿ ನೀರನ್ನು ಹಾಕಿ ಬಿಸಿ ಮಾಡಿ.ಮೊಝ್ಝಾರೆಲ್ಲಾ ಚೀಸ್ ನ್ನು ಸ್ಟಿಕ್ ನಲ್ಲಿ ಚುಚ್ಚಿ ಇದಕ್ಕೆ ಮಸಾಲೆ ಮಿಶ್ರಿತ ಮಾಂಸವನ್ನು ಅಂಟಿಸಿ. ಈ ವೇಳೆ ಮೊಟ್ಟೆಯ ಬಿಳಿಯ ಭಾಗವನ್ನು ಬಳಕೆ ಮಾಡಬಹುದು. ಇದನ್ನು ನಂತರ ಶಾವಿಗೆಯಲ್ಲಿ ಹೊರಳಿಸಿ, ಸ್ಟೀಮ್ ನಲ್ಲಿ 5-10 ನಿಮಿಷ ಬೇಯಿಸಿಕೊಳ್ಳಿ.ಕಡಾಯಿಯಲ್ಲಿ ಎಣ್ಣೆಯನ್ನು ಹಾಕಿ ಬಿಸಿ ಮಾಡಿ, ಸ್ಟೀಮ್ ನಲ್ಲಿ ಬೇಯಿಸಿದ ಸ್ಟಿಕ್ ಗಳು ಸ್ವಲ್ಪ ತಣ್ಣಗಾದ ಬಳಿಕ ಎಣ್ಣೆಯಲ್ಲಿ ಹಾಕಿ ಡೀಪ್ ಫ್ರೈ ಮಾಡಿ. ಇದೀಗ ರುಚಿಕರವಾದ ಚೀಸ್ ಕಬಾಬ್‌ ಸವಿಯಲು ಸಿದ್ಧ.