ಶಾಹಿ ಪನ್ನೀರ್ ಬಿರಿಯಾನಿ ರುಚಿಕರವಾದ ಶಾಹಿ ಪನ್ನೀರ್ ಬಿರಿಯಾನಿ ಮಾಡುವ ವಿಧಾನ... ಬೇಕಾಗುವ ಪದಾರ್ಥಗಳು...ಬಾಸುಮತಿ ಅಕ್ಕಿ- 1 ಬಟ್ಟಲುತುಪ್ಪ-ಸ್ವಲ್ಪಚಕ್ಕೆ, ಲವಂಗ, ಏಲಕ್ಕಿ- ಸ್ವಲ್ಪಪೆಪ್ಪರ್- ಸ್ವಲ್ಪಪಲಾವ್ ಎಲೆ- 4-6ಈರುಳ್ಳಿ- 1ಹಸಿಮೆಣಸಿನ ಕಾಯಿ- 6ಶುಂಠಿ-ಬೆಳ್ಳುಳ್ಳಿ ಪೇಸ್ಟ್- 1 ಚಮಚಕ್ಯಾರೇಟ್, ಬೀನ್ಸ್, ಹಸಿಬಟಾಣಿ- ಸ್ವಲ್ಪಪನ್ನೀರ್- 1 ಬಟ್ಟಲುಗರಂ ಮಸಾಲೆ- ಅರ್ಧ ಚಮಚಚಾಟ್ ಮಸಾಲೆ- ಕಾಲು ಚಮಚದನಿಯಾ ಪುಡಿ- ಅರ್ಧ ಚಮಚಪೆಪ್ಪರ್ ಪುಡಿ- ಸ್ವಲ್ಪಜೀರಿಗೆ ಪುಡಿ- ಸ್ವಲ್ಪಉಪ್ಪು- ರುಚಿಗೆ ತಕ್ಕಷ್ಟುಬಿರಿಯಾನಿ ಮಸಾಲೆ ಪುಡಿ- 1 ಚಮಚಬೆಣ್ಣೆ- ಸ್ವಲ್ಪಗೋಡಂಬಿ, ದ್ರಾಕ್ಷಿ, ಪಿಸ್ತಾ- ಸ್ವಲ್ಪಬಾದಾಮಿ- ಸ್ವಲ್ಪ (ನೀರಿನಲ್ಲಿ ನೆನೆಸಿ, ಸಿಪ್ಪೆ ತೆಗೆದದ್ದು)ಕೇಸರಿ- ಹಾಲಿನಲ್ಲಿ ನೆನೆಸಿದ್ದು ಸ್ವಲ್ಪಮಾಡುವ ವಿಧಾನ...ಮೊದಲು ಬಾಸ್ಮತಿ ಅಕ್ಕಿಯನ್ನು ತೊಳೆದು, ಕೊಂಚ ನೆನೆಸಿ, ಉದುರು ಉದುರಾಗಿ ಬೇಯಿಸಿ ಅನ್ನ ತಯಾರಿಸಿಕೊಳ್ಳಬೇಕು. ಬಳಿಕ ಪ್ಯಾನ್ ಬಿಸಿ ಮಾಡಿ, ಬೆಣ್ಣೆ ಹಾಕಿ, ಗೊಡಂಬಿ, ದ್ರಾಕ್ಷಿ, ಪಿಸ್ತಾ, ಬಾದಾಮಿ, ಪನೀರ್, ಈರುಳ್ಳಿಯನ್ನು ಹುರಿದಿಟ್ಟುಕೊಳ್ಳಬೇಕು.ನಂತರ ಕುಕ್ಕರ್ ಬಿಸಿ ಮಾಡಿ, ತುಪ್ಪ ಚಕ್ಕೆ, ಲವಂಗ, ಏಲಕ್ಕಿ, ಪೆಪ್ಪರ್, ಪಲಾವ್ ಎಲೆ, ಈರುಳ್ಳಿ, ಹಸಿಮೆಣಸಿನ ಕಾಯಿ ಹಾಕಿ ಹುರಿಯಿರಿ. ಬಳಿಕ ಶುಂಠಿ- ಬೆಳ್ಳುಳ್ಳಿ ಪೇಸ್ಟ್, ಕ್ಯಾರೇಟ್, ಬಟಾಣಿ, ಬೀನ್ಸ್ ಹಾಕಿ ಹುರಿಯಿರಿ. ಈಗ ಗರಂ ಮಸಾಲೆ, ಚಾಟ್ ಮಸಾಲೆ, ದನಿಯಾ ಪುಡಿ, ಪೆಪ್ಪರ್ ಪುಡಿ, ಜೀರಿಗೆ ಪುಡಿ, ಉಪ್ಪು, ಬಿರಿಯಾನಿ ಮಸಾಲೆ, ಇವೆಲ್ಲವನ್ನೂ ಸೇರಿಸಿ. ಒಂದು ವಿಶಲ್ ಬರುವ ಹಾಗೆ ಬೇಯಿಸಿ. ಬಳಿಕ ಇದಕ್ಕೆ ಕೇಸರಿ ದಳ, ಅನ್ನ, ಹುರಿದಿಟ್ಟ ಪನೀರ್, ಈರುಳ್ಳಿ, ಡ್ರೈಫ್ರೂಟ್ಸ್ ಸೇರಿಸಿದರೆ, ಶಾಹಿ ಪನೀರ್ ಬಿರಿಯಾನಿ ಸವಿಯಲು ಸಿದ್ಧ.