ಬಾಳೆ ಹಣ್ಣಿನ ಹಲ್ವಾ ರುಚಿಕರವಾದ ಬಾಳೆ ಹಣ್ಣಿನ ಹಲ್ವಾ ಮಾಡುವ ವಿಧಾನ... ಬೇಕಾಗುವ ಪದಾರ್ಥಗಳು...ಗೋಧಿ ಹಿಟ್ಟು- 3 ಬಟ್ಟಲುಸಕ್ಕರೆ ಅಥವಾ ಬೆಲ್ಲ- 3 ಬಟ್ಟಲುಬಾಳೆ ಹಣ್ಣು- 5ತುಪ್ಪ- ಎರಡೂವರೆ ಬಟ್ಟಲುಹಾಲು- 1 ಬಟ್ಟಲುದ್ರಾಕ್ಷಿ-ಗೋಡಂಬಿ-ಸ್ವಲ್ಪಉಪ್ಪು- ಚಿಟಿಕೆಯಷ್ಟುಮಾಡುವ ವಿಧಾನ...ಒಂದು ಬಾಣಲೆಗೆ ತುಪ್ಪ ಹಾಕಿ ಗೋಧಿ ಹಿಟ್ಟು ಸೇರಿಸಿ ಪರಿಮಳ ಬರುವಂತೆ ಹುರಿಯಿರಿ.ಸಣ್ಣಗೆ ಕತ್ತರಿಸಿದ ಬಾಳೆಹಣ್ಣಿನ ಹೋಳುಗಳನ್ನು ಸೇರಿಸಿ ಮತ್ತೆ ಹುರಿಯಿರಿ. ನಂತರ ಎರಡು ಕಪ್ ಬಿಸಿ ನೀರು ಹಾಕಿ ಸಣ್ಣ ಉರಿಯಲ್ಲಿ ತಳ ಹಿಡಿಯದಂತೆ ಬೇಯಿಸಿ.ನಂತರ ಹಾಲು, ಸಕ್ಕರೆ, ಉಪ್ಪು ಹಾಕಿ ಚೆನ್ನಾಗಿ ಕೆದಕಿ ಬೇಯಿಸಿ. ಗಟ್ಟಿಯಾದ ನಂತರ ತುಪ್ಪ ಸವರಿದ ಬಟ್ಟಲಿಗೆ ಹಾಕಿ ಚಾಕುವಿನಿಂದ ಬೇಕಾದ ಆಕಾರದಲ್ಲಿ ಕತ್ತರಿಸಿ. ಮೇಲೆ ತುಪ್ಪದಲ್ಲಿ ಕರಿದ ದ್ರಾಕ್ಷಿ, ಗೋಡಂಬಿ ಅಂಟಿಸಿ.