ಗೋಧಿ ಬಿಸ್ಕೆಟ್ ರುಚಿಕರವಾದ ಗೋಧಿ ಬಿಸ್ಕೆಟ್ ಮಾಡುವ ವಿಧಾನ... ಬೇಕಾಗುವ ಪದಾರ್ಥಗಳು...ಗೋಧಿ ಹಿಟ್ಟು- 1 ಬಟ್ಟಲುಏಲಕ್ಕಿ ಪುಡಿ- ¼ ಚಮಚಜಾಯಿಕಾಯಿ ಪುಡಿ- ಚಿಟಿಕೆಉಪ್ಪು- ಚಿಟಿಕೆತುಪ್ಪ- 5 ಚಮಚಸಕ್ಕರೆ- ¼ ಬಟ್ಟಲುಹಾಲು- 4 ಚಮಚಮಾಡುವ ವಿಧಾನ...ಒಂದು ಬೌಲ್ ಗೆ ಗೋಧಿ ಹಿಟ್ಟು, ಉಪ್ಪು, ಏಲಕ್ಕಿ ಪುಡಿ, ಜಾಯಿಕಾಯಿ ಪುಡಿ ಸೇರಿಸಿ ಮಿಶ್ರಣ ಮಾಡಿಕೊಳ್ಳಿ. ನಂತರ ಒಂದು ಬೌಲ್ ಗೆ ತುಪ್ಪ, ಹಾಗೂ ಸಕ್ಕರೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇದನ್ನು ಗೋಧಿಹಿಟ್ಟಿನ ಮಿಶ್ರಣಕ್ಕೆ ಸೇರಿಸಿ. ನಂತರ ಹಾಲು ಹಾಕಿ ನಾದಿಕೊಳ್ಳಿ.ನಂತರ ಇದನ್ನು ತುಸು ದಪ್ಪಗೆ ಲಟ್ಟಿಸಿಕೊಂಡು ಫೋರ್ಕ್ ನ ಸಹಾಯದಿಂದ ಇದರ ಮೇಲೆ ನಿಧಾನಕ್ಕೆ ಚುಚ್ಚಿ. ಚಿಕ್ಕ ಚಿಕ್ಕ ತೂತಿನ ಹಾಗೇ ಕಾಣಿಸುತ್ತದೆ. ನಂತರ ಚೌಕಾಕಾರದಲ್ಲಿ ಕತ್ತರಿಸಿ. ಇದನ್ನು ಬೇಕಿಂಗ್ ಟ್ರೆಯಲ್ಲಿ ಇಟ್ಟು ಒವೆನ್ ನಲ್ಲಿ 20 ನಿಮಿಷಗಳ ಕಾಲ ಬೇಕ್ ಮಾಡಿಕೊಳ್ಳಿ. ಇದು ತಣ್ಣಗಾದ ಮೇಲೆ ಗಾಳಿಯಾಡದ ಡಬ್ಬದಲ್ಲಿ ತುಂಬಿಸಿಡಿ.