8 ಮಂದಿ ನಿಪಾ ಶಂಕಿತರ ಪರೀಕ್ಷಾ ಫಲಿತಾಂಶ ನೆಗೆಟಿವ್: ನಿಟ್ಟುಸಿರು ಬಿಟ್ಟ ಕೇರಳ ಆರೋಗ್ಯ ಸಿಬ್ಬಂದಿ ನಿಪಾ ವೈರಾಣುವಿಗೆ ತುತ್ತಾಗಿರುವ ಶಂಕೆ ಬಂದ ಹಿನ್ನೆಲೆಯಲ್ಲಿ 13 ಮಂದಿಯ ಮಾದರಿ ಸಂಗ್ರಹಿಸಿ ಪುಣೆಯ ರಾಷ್ಟ್ರೀಯ ವೈರಾಣು ಕೇಂದ್ರಕ್ಕೆ ಕಳುಹಿಸಲಾಗಿತ್ತು. ಕೊಚ್ಚಿ: ಕೊರೊನಾದಿಂದ ತತ್ತರಿಸಿರುವ ಕೇರಳದಲ್ಲಿ ನಿಪಾ ವೈರಾಣು ಬೇರು ಬಿಡುವ ಮುನ್ಸೂಚನೆ ತೀವ್ರ ಆತಂಕಕ್ಕೆ ಕಾರಣವಾಗಿತ್ತು. ಇತ್ತೀಚಿಗೆ ನಿಪಾ ವೈರಾಣುವಿಗೆ ತುತ್ತಾಗಿರುವ ಶಂಕೆ ಬಂದ ಹಿನ್ನೆಲೆಯಲ್ಲಿ 13 ಮಂದಿಯ ಮಾದರಿ ಸಂಗ್ರಹಿಸಿ ಪುಣೆಯ ರಾಷ್ಟ್ರೀಯ ವೈರಾಣು ಕೇಂದ್ರಕ್ಕೆ ಕಳುಹಿಸಲಾಗಿತ್ತು. ಅಲ್ಲಿಂದ ಪರೀಕ್ಷಾ ಫಲಿತಾಂಶ ಹೊರಬಂದಿದ್ದು 8 ಮಂದಿಯ ಫಲಿತಾಂಶದಲ್ಲಿ ನೆಗೆಟಿವ್ ವರದಿ ಬಂದಿದೆ. ಇನ್ನೂ 5 ಮಂದಿಯ ಫಲಿತಾಂಶ ಇನ್ನೂ ಬರಬೇಕಿದೆ. ಇದನ್ನೂ ಓದಿ: ಕೇರಳದ ಕೋಳಿಕೋಡ್'ನಲ್ಲಿ ನಿಫಾ ವೈರಸ್ ಪತ್ತೆ; 13 ವರ್ಷದ ಬಾಲಕ ಆಸ್ಪತ್ರೆಗೆ ದಾಖಲುಇತ್ತೀಚಿಗೆ ನಿಪಾದಿಂದ ಮೃತಪಟ್ತ ಬಾಲಕನ ಪೋಷಕರ ಮಾದರಿಯನ್ನೂ ಪುಣೆಗೆ ಕಳಿಸಲಾಗಿತ್ತು. ನೆಗೆಟಿವ್ ವರದಿ ಬಂದಿರುವ ರಿಪೋರ್ಟ್ ಗಳಲ್ಲಿ ಅವರದೂ ಸೇರಿದೆ.ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆರೋಗ್ಯ ಸಚಿವೆ ವೀಣಾ ಜಾರ್ಜ್ ಸಂತಸ ವ್ಯಕ್ತಪಡಿಸಿದ್ದು ಆರೋಗ್ಯ ಸಿಬ್ಬಂದಿ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.ಕೇರಳದಿಂದ ಬರುವ ವಿದ್ಯಾರ್ಥಿಗಳು, ಉದ್ಯೋಗಿಗಳಿಗೆ ಶೈಕ್ಷಣಿಕ ಸಂಸ್ಥೆ ಹಾಗೂ ಅವರ ಕಚೇರಿಯಿಂದಲೇ ಸಾಂಸ್ಥಿಕ ಕ್ವಾರಂಟೈನ್ ವ್ಯವಸ್ಥೆ!ಮೊದಲ ಡೋಸ್ ಪಡೆದ ನಾಲ್ಕು ವಾರ ನಂತರ ಕೋವಿಶೀಲ್ಡ್ 2ನೇ ಡೋಸ್ ಲಸಿಕೆಗೆ ಅವಕಾಶ ನೀಡಿ: ಕೇಂದ್ರಕ್ಕೆ ಕೇರಳ ಹೈಕೋರ್ಟ್ ನಿರ್ದೇಶನಪ್ರಧಾನಿ ನರೇಂದ್ರ ಮೋದಿ ಮನೆಯಂಗಳ ತಲುಪಿದ ಕೇರಳ ಬಾಲಕಿಯ ಸೀಬೆ ಗಿಡ!ಆಗಸ್ಟ್ 30 ರಿಂದ ಕೇರಳದಲ್ಲಿ ನೈಟ್ ಕರ್ಫ್ಯೂ ಜಾರಿಗೆ