ನಿಮ್ಮ ಜೀರ್ಣಾಂಗ ವ್ಯೂಹ ಎಷ್ಟು ಆರೋಗ್ಯಕರವಾಗಿದೆ ಎಂದು ನಿಮಗೆ ಗೊತ್ತೇ...? ಜೀರ್ಣಾಂಗ ವ್ಯೂಹ ಎಂಬುದು ಮಾನವನ ದೇಹದಲ್ಲಿ ಬಹುಮುಖ್ಯವಾದ ಅಂಗವಾಗಿದ್ದು, ಇದು ದೇಹದಲ್ಲಿ ಆಹಾರವನ್ನು ಜೀರ್ಣಗೊಳಿಸುವ ಕ್ರಿಯೆಯನ್ನು ಮಾಡುತ್ತದೆ. ದೇಹಕ್ಕೆ ಬೇಕಾದ ಗ್ಲೂಕೋಸ್, ಕೊಬ್ಬು, ಪ್ರೊಟೀನ್ ಗಳನ್ನು ಸಂಗ್ರಹಿಸುವ ಮತ್ತು ದೇಹದಲ್ಲಿರುವ ವಿಷ ಪದಾರ್ಥಗಳನ್ನು ಹೊರಹಾಕುವ ಕ್ರಿಯೆಯನ್ನೂ ನಿರ್ವಹಿಸುತ್ತದೆ. ಜೀರ್ಣಾಂಗ ವ್ಯೂಹ ಎಂಬುದು ಮಾನವನ ದೇಹದಲ್ಲಿ ಬಹುಮುಖ್ಯವಾದ ಅಂಗವಾಗಿದ್ದು, ಇದು ದೇಹದಲ್ಲಿ ಆಹಾರವನ್ನು ಜೀರ್ಣಗೊಳಿಸುವ ಕ್ರಿಯೆಯನ್ನು ಮಾಡುತ್ತದೆ. ದೇಹಕ್ಕೆ ಬೇಕಾದ ಗ್ಲೂಕೋಸ್, ಕೊಬ್ಬು, ಪ್ರೊಟೀನ್ ಗಳನ್ನು ಸಂಗ್ರಹಿಸುವ ಮತ್ತು ದೇಹದಲ್ಲಿರುವ ವಿಷ ಪದಾರ್ಥಗಳನ್ನು ಹೊರಹಾಕುವ ಕ್ರಿಯೆಯನ್ನೂ ನಿರ್ವಹಿಸುತ್ತದೆ. ಈ ಜೀರ್ಣಾಂಗ ವ್ಯವಸ್ಥೆಯಲ್ಲಿ ಸ್ವಲ್ಪ ಸಮಸ್ಯೆಗಳು ಎದುರಾದರೂ ಮನುಷ್ಯ ಅನಾರೋಗ್ಯದಿಂದ ಒದ್ದಾಡುವಂತಹ ಪರಿಸ್ಥಿತಿಗಳು ಎದುರಾಗುತ್ತವೆ. ಹೀಗಾಗಿ ಜೀರ್ಣಕ್ರಿಯೆ ಸರಿಯಾಗಿ ನಡೆಯುವಂತೆ ನೋಡಿಕೊಳ್ಳುವುದು ಮುಖ್ಯವಾಗುತ್ತದೆ. ಇದ್ದಕ್ಕಿದ್ದಂತೆಯ ದೇಹದ ತೂಕ ಇಳಿಯುವುದು, ಹೊಟ್ಟೆನೋವು, ಹೊಟ್ಟೆ ಉಬ್ಬರ, ಆಹಾರ ಸೇವನೆ ಮಾಡಲು ಸಾಧ್ಯವಾಗದೆ ಇರುವ ಲಕ್ಷಣಗಳು ಕಂಡು ಬಂದರೆ ನಿಮ್ಮ ಜೀರ್ಣಾಂಗ ವ್ಯೂಹದಲ್ಲಿ ಸಮಸ್ಯೆಯಿದೆ ಎಂದು ತಿಳಿಯಬೇಕು. ಜೀರ್ಣಾಂಗವ್ಯೂಹದಲ್ಲಿ ಸಮಸ್ಯೆ ಎದುರಿಸುತ್ತಿರುವವರು ಏನನ್ನು ಮಾಡಬೇಕು ಹಾಗೂ ಏನನ್ನು ಮಾಡಬಾರದು?... ಈ ಬಗ್ಗೆ ಇಲ್ಲಿದೆ ಮಾಹಿತಿ...