ಸೆ.26 ವಿಶ್ವ ಸಂತಾನ ನಿಯಂತ್ರಣ ದಿನ: ಜನನ ನಿಯಂತ್ರಣಕ್ಕಿರುವ ಹೊಸ ವಿಧಾನಗಳು ಈ ವರೆಗೂ ಜನಸಂಖ್ಯೆ ನಿಯಂತ್ರಕ್ಕೆ ಬಳಕೆ ಮಾಡಲಾಗುತ್ತಿದ್ದ ಕಾಂಡೋಮ್, ಮಾತ್ರೆಗಳಿಗಿಂತಲೂ ಸುಧಾರಿತ ವಿಧಾನಗಳನ್ನು ಕಂಡುಹಿಡಿಯಲಾಗಿದೆ. ಚೆನ್ನೈ: ಸೆ.26 ರಂದು ವಿಶ್ವ ಸಂತಾನ ನಿಯಂತ್ರಣ ದಿನವನ್ನು ಆಚರಿಸಲಾಗುತ್ತದೆ. ವಿಜ್ಞಾನ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಹೊಸ ಪ್ರಯೋಗಗಳು ಜನಸಂಖ್ಯೆ ನಿಯಂತ್ರಣಕ್ಕೆ ಹೊಸ ಮಾರ್ಗಗಳನ್ನು ಕಂಡುಕೊಳ್ಳಲು ಸಹಾಯಕಾರಿಯಾಗಿದ್ದು, ಈ ವರೆಗೂ ಜನಸಂಖ್ಯೆ ನಿಯಂತ್ರಕ್ಕೆ ಬಳಕೆ ಮಾಡಲಾಗುತ್ತಿದ್ದ ಕಾಂಡೋಮ್, ಮಾತ್ರೆಗಳಿಗಿಂತಲೂ ಸುಧಾರಿತ ವಿಧಾನಗಳನ್ನು ಕಂಡುಹಿಡಿಯಲಾಗಿದೆ. ಹೊಸ ವಿಧಾನದಲ್ಲಿ ಜನಸಂಖ್ಯೆ ನಿಯಂತ್ರಣಕ್ಕಾಗಿ ಕಾಂಡೋಮ್ ಹಾಗೂ ಮಾತ್ರೆಗಳ ಅಗತ್ಯವಿರುವುದಿಲ್ಲ. ಬದಲಾಗಿ ವಜಿನಲ್‌ ರಿಂಗ್ ನ್ನು ಬಳಕೆ ಮಾಡಲಾಗುತ್ತದೆ. ಸಣ್ಣ ಪ್ರಮಾಣದಲ್ಲಿ ಹಾರ್ಮೋನುಗಳನ್ನು ಬಿಡುಗಡೆ ಮಾಡುವ ಪ್ಲಾಸ್ಟಿಕ್ ರಿಂಗ್ ಮಾದರಿಯಲ್ಲಿರಲಿರುವ ವಜಿನಲ್ ರಿಂಗ್ ನ್ನು ಗರ್ಭ ನಿರೋಧಕವಾಗಿ ಬಳಕೆ ಮಾಡಲಾಗುತ್ತಿದೆ. ವಜಿನಲ್ ರಿಂಗ್ ಬಳಕೆಯಿಂದ ಬಂಜೆತನ ಉಂಟಾಗುವ ಆತಂಕವೂ ಇರುವುದಿಲ್ಲ ಎನ್ನುತ್ತಾರೆ ವೈದ್ಯರು. ವಜಿನಲ್ ರಿಂಗ್ ನ್ನು ಮಹಿಳೆಯರೇ ಅಳವಡಿಸಿಕೊಳ್ಳಬಹುದಾಗಿದ್ದು, ದೀರ್ಘಾವಧಿಯಲ್ಲಿ ಅಗತ್ಯವಿದ್ದರೆ ವೈದ್ಯರು ಹಾಗೂ ನರ್ಸ್ ಗಾಲ ಸಹಾಯದಿಂದ ಅಳವಡಿಸಿಕೊಳ್ಳಬಹುದಾಗಿದೆ. ನಗರ ಪ್ರದೇಶಗಳ ಮಹಿಳೆಯರು ವಜಿನಲ್ ರಿಂಗ್ ಬಳಕೆ ಮಾಡುವ ಹೊಸ ವಿಧಾನವನ್ನು ಹೆಚ್ಚು ಬಳಸುತ್ತಿದ್ದು, ಗ್ರಾಮೀಣ ಪ್ರದೇಶದಲ್ಲಿ ಈ ಹೊಸ ವಿಧಾನ ಇನ್ನು ಜನಪ್ರಿಯವಾಗಿಲ್ಲ ಎನ್ನುತ್ತಾರೆ ಪಬ್ಲಿಕ್ ಹೆಲ್ತ್ ಕ್ಷೇತ್ರಕ್ಕೆ ಸಂಬಂಧಿಸಿದ ಎನ್ ಜಿ ಒ ದಲ್ಲಿ ಕಾರ್ಯನಿರ್ವಹಿಸುತ್ತಿರುವ ಅನಿತಾ ವಿಕ್ಟರ್.