ಹೊಸ ವರ್ಷದಲ್ಲಿ ಆರೋಗ್ಯಕರ ಮನಸ್ಸಿಗಾಗಿ ಇಲ್ಲಿವೆ ಕೆಲವೊಂದು ಟಿಪ್ಸ್ ದೇಹದ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯ ಮುಖ್ಯ ಎಂಬುದನ್ನು ನಾವು ಮರೆತೆ ಬಿಟ್ಟಿರುತ್ತೇವೆ. ಸಹಜವಾಗಿ ಆರೋಗ್ಯದ ಸಮಸ್ಯೆಗಳು ಕಾಣಿಸಿಕೊಳ್ಳುವುದು... ಬೆಂಗಳೂರು: ಹೊಸ ವರ್ಷಕ್ಕಾಗಿ ಹಲವು ನಿರ್ಣಯ ಕೈಗೊಳ್ಳುವುದು ಸಹಜ. ಬರೆಯುತ್ತಿದ್ದ ಪುಸ್ತಕ ಪೂರ್ಣಗೊಳಿಸುತ್ತೇನೆ, ದೇಹದ ತೂಕ ಕಡಿಮೆ ಮಾಡಿಕೊಳ್ಳುತ್ತೇನೆ, ಸಿಗರೇಟು ಸೇದುವುದನ್ನು ತ್ಯಜಿಸತ್ತೇನೆ ಎಂಬೆಲ್ಲಾ ನಿರ್ಣಯ ಕೈಗೊಳ್ಳುವುದು ಸಾಮಾನ್ಯ. ಇದೆಲ್ಲದರ ಮಧ್ಯೆ ನಮಗೆ ಅಗತ್ಯವಾದ ಪ್ರಮುಖ ಅಂಶಗಳನ್ನೇ ನಾವು ಮರೆತು ಬಿಟ್ಟಿರುತ್ತೇವೆ. ಎಲ್ಲಕ್ಕಿಂತ ಮುಖ್ಯವಾಗಿ ನಿಮ್ಮ ಮಾನಸಿಕ ಆರೋಗ್ಯ ಅತಿ ಮುಖ್ಯ. ದೇಹದ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯ ಮುಖ್ಯ ಎಂಬುದನ್ನು ನಾವು ಮರೆತೇ ಬಿಟ್ಟಿರುತ್ತೇವೆ. ಸಹಜವಾಗಿ ಆರೋಗ್ಯದ ಸಮಸ್ಯೆಗಳು ಕಾಣಿಸಿಕೊಳ್ಳುವುದು ಮದ್ಯಸೇವನೆ ಮತ್ತು ಮಾದಕ ದ್ರವ್ಯಗಳಿಂದ, ಆದರೆ ಒಂಟಿತನ ಮತ್ತು ತಿರಸ್ಕಾರ ಗಳು ಕೂಡ ಮಾನಸಿಕ ಆರೋಗ್ಯದ ಮೇಲೆ ಪ್ರಭಾವ ಬೀರುತ್ತವೆ ಎಂದು ಮಾನಸಿಕ ತಜ್ಞ ಎಂ.ಎಸ್ ರಾಮಯ್ಯ ಆಸ್ಪತ್ರೆ ವೈದ್ಯ ಡಾ. ವಿರುಪಾಕ್ಷ ತಿಳಿಸಿದ್ದಾರೆ. ಸಾಮಾಜಿಕ ಒಂಟಿತನ ನಮ್ಮ ಭಾವನೆಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಆದರೆ ಇಂಥಹ ಸಂಗತಿಗಳನ್ನು ನಾವು ನಿರ್ಲಕ್ಷ್ಯ ವಹಿಸುತ್ತೇವೆ. ಹೊಸ ವರ್ಷ ನಮಗಾಗಿ ಏನು ತರುತ್ತದೆ ಎಂಬುದು ಮುಖ್ಯವಲ್ಲ, ಮಾನಸಿಕ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡುವುದು ಅತ್ಯಾವಶ್ಯಕ. ಇದರಿಂದ ನಮ್ಮ ಎಲ್ಲಾ ಆಸೆಗಳು ಪೂರೈಸಿ ಸಂತೋಷದಿಂದ ಇರುತ್ತೇವೆ. ಕೆಲವೇ ಕೆಲವು ನಿಮಿಷಗಳು ಕುಳಿತು ಧ್ಯಾನ ಮಾಡಿ, ನಂತರ ನಿಮ್ಮ ಕೆಲಸ ಕಾರ್ಯಗಳನ್ನು ಆರಂಭಿಸುವುದರಿಂದ ನಿಮ್ಮ ಇಡೀ ದಿನ ಸಂತಸವಾಗಿರುತ್ತದೆ. ಧನಾತ್ಮಕ ವಿಚಾರಗಳ ಬಗ್ಗೆ ತಿಳಿದುಕೊಳ್ಳುವುದರಿಂದ ಹಾಗೆಯೇ ಧನಾತ್ಮಕ ಚಿಂತನೆಗಳನ್ನು ಮೈಗೂಡಿಸಿಕೊಳ್ಳುವುದರಿಂದ ಋಣಾತ್ಮಕ ಅಂಶಗಳು ನಮ್ಮಿಂದ ದೂರವಾಗಿ ಮಾನಸಿಕವಾಗಿ ಆರೋಗ್ಯವಾಗಿರಬಹುದು. ಸಣ್ಣ ಸಣ್ಣ ವಿಷಯಗಳಲ್ಲಿ ಸಂತಸ ಕಂಡಿಕೊಳ್ಳುವುದು ಮಾನಸಿಕ ಆರೋಗ್ಯಕ್ಕೆ ಹೆಚ್ಚು ಸಹಾಯಕಾರಿ, ಇಷ್ಟವಾದ ವಸ್ತು ಖರೀದಿಸುವುದು ನಮ್ಮ ಸಂತೋಷವನ್ನು ಇಮ್ಮಡಿಗೊಳಿಸುತ್ತದೆ. ಕೂತೂಹಲವನ್ನು ಮೆಟ್ಟಿ ನಿಲ್ಲಲು ನೀವು ಭಯಪಡುವಂತ ಕೆಲಸಗಳನ್ನು ಮಾಡಲು ಹಿಂಜರಿಯಬೇಡಿ, ಎಲ್ಲದಕ್ಕೂ ಯಸ್ ಎಂದು ಹೇಳಿ. ಯಾವುದೇ ಭಯವಿಲ್ಲದೇ ನೋ ಎಂದು ಹೇಳುವುದನ್ನು ಅಭ್ಯಾಸಮಾಡಿಕೊಳ್ಳಿ, ಆಗತ್ಯವಿರುವಾಗ ಸ್ವಲ್ಪ ಸಮಯ ಬ್ರೇಕ್ ತೆಗೆದುಕೊಳ್ಳಿ, ಯಾವಾಗಲೂ ಕೆಲಸದ ಒತ್ತಡದಲ್ಲೇ ಕಾಲ ಕಳೆಯುವುದರಿಂದ ಮಾನಸಿಕ ಆರೋಗ್ಯ ಹದಗೆಡುತ್ತದೆ. ಕೆಟ್ಟ ದಿನಗಳು ಜೀವನದ ಒಂದು ಭಾಗ, ಕೆಟ್ಟ ದಿನಗಳನ್ನು ಬೈಯ್ಯುತ್ತಾ, ಮಾಡಿದ ತಪ್ಪಿಗಾಗಿ ಯಾವಾಗಲೂ ಕೊರಗುತ್ತಾ ಕೂರಬಾರದು. ಇದು ನಮ್ಮನ್ನು ನಾವು ಶಿಕ್ಷಿಸಿಕೊಂಡಂತೆ. ಬೇರೆಯವರ ಜೊತೆ ಹೋಲಿಕೆ ಮಾಡುವುದನ್ನು ಮೊದಲು ನಿಲ್ಲಿಸಿ, ನಮಗೋಸ್ಕರ, ನಮ್ಮ ಸಂತೋಷಕ್ಕೋಸ್ಕರ ಬದುಕುವುದನ್ನು ಕಲಿಯಬೇಕು. ಅಗತ್ಯವಿದ್ದಾಗ ಸಹಾಯ ಕೋರಿ, ಜೊತೆಗೆ ನಿಮ್ಮ ಸಮಸ್ಯೆಗಳ ಬಗ್ಗೆ ಒಪನ್ ಅಪ್ ಆಗಿರಿ, ಸಮಯ ಸಂದರ್ಭದ ಬಗ್ಗೆ ಪರಿಣಾಮಕಾರಿಯಾಗಿ ವಿವರಿಸಿ.