ಆಟೊಮೊಬೈಲ್‌ಗೆ ಬೇಕು ಬೂಸ್ಟ್! ಕಳೆದ 12 ವರ್ಷದಲ್ಲಿ ಮೊದಲ ಬಾರಿಗೆ ಭಾರತೀಯ ಆಟೋಮೊಬೈಲ್ ಉದ್ಯಮವು ಋಣಾತ್ಮಕ ಬೆಳವಣಿಗೆಯತ್ತ ಸಾಗಿದೆ. ಕಳೆದ ವರ್ಷ ಸುಮಾರು 15 ಲಕ್ಷ ಕಾರುಗಳು ಮಾರಾಟವಾಗಿದ್ದರೆ ಪ್ರಸಕ್ತ ವರ್ಷ ಇದು 14 ಲಕ್ಷಕ್ಕೆ ಇಳಿದಿದೆ. ಆರ್‌ಬಿಐನಿಂದ ತೆರಿಗೆ, ಸಾಲದ ಮೇಲಿನ ಬಡ್ಡಿ ಹಾಗೂ ಇನ್ನು ಕೆಲ ಬದಲಾವಣೆಯ ನಿರೀಕ್ಷೆಯನ್ನಿಟ್ಟುಕೊಂಡು ಪ್ರಸಕ್ತ ಆರ್ಥಿಕ ವರ್ಷದಲ್ಲಿ ಮಾರಾಟದ ಪ್ರಮಾಣ ಹೆಚ್ಚುವ ಭರವಸೆ ಇರಿಸಿಕೊಂಡಿದೆ. ಭಾರತ ಸರ್ಕಾರದ ಕೆಲ ನೀತಿಗಳ ಹಿನ್ನೆಲೆಯಲ್ಲಿಯೂ ಈಗಾಗಲೇ ಹೂಡಿಕೆಗೆ ಮುಂದಾಗಿದ್ದ ವಿದೇಶಿ ಕಂಪನಿಗಳು ವಿಳಂಬ ಧೋರಣೆ ಅನುಸರಿಸುತ್ತಿವೆ.