ಆಡಿ ಕ್ಯೂಟ್ 3 ಆಡಿ ಕ್ಯೂ 3. ಇದೊಂಥರಾ ಕ್ಯೂಟ್ 3!. ಸುಖಾಸೀನ ಪಯಣಕ್ಕೆ ಸ್ಪೀಡ್‌ಗೆ ಮತ್ತು ಆಫ್‌ರೋಡಿಂಗ್‌ಗೆ ಮೂರಕ್ಕೂ ... ಆಡಿ ಕ್ಯೂ 3. ಇದೊಂಥರಾ ಕ್ಯೂಟ್ 3!. ಸುಖಾಸೀನ ಪಯಣಕ್ಕೆ ಸ್ಪೀಡ್‌ಗೆ ಮತ್ತು ಆಫ್‌ರೋಡಿಂಗ್‌ಗೆ ಮೂರಕ್ಕೂ ಕ್ಯೂ 3 ಸೈ. ಈಗ ಕ್ಯೂ 3 ಇನ್ನಷ್ಟು ಕ್ಯೂಟ್ ಆಗಿದೆ. ಕ್ಯೂ 3ಡೈನಾಮಿಕ್ ಎಂಬ ಮಾಡೆಲ್ಲನ್ನು ಕಂಪನಿ ಮಾರುಕಟ್ಟೆಗೆ ಪರಿಚಯಿಸಿದೆ. ಹೊರನೋಟಕ್ಕೆ ಕೆಲವು ಬದಲಾವಣೆಗಳ ಜತೆಹೆ ಆಡಿ ಡ್ರೈವ್ ಸೆಲೆಕ್ಟ್ ಆಯ್ಕೆಯನ್ನೂ ಅಳವಡಿಸಲಾಗಿದೆ. ಇದರಲ್ಲಿ ಕಂಫರ್ಟ್ ಆಟೋ ಮತ್ತು ಡೈನಾಮಿಕ್ ಆಯ್ಕೆಗಳನ್ನು ಮಾಡಿಕೊಳ್ಳಬಹುದು. ಹೊರಭಾಗದ ವಿನ್ಯಾಸ ಗಮನಿಸಿದರೆ ಬ್ರೇಕ್ ಲೈಟ್‌ಗಳು ಕ್ರೋಮ್ ಫ್ರೇಮ್ ಪಡೆದಿದೆ. ಎದುರಿನ ಗ್ರಿಲ್ ಹಾಗೂ ಬಂಪರ್‌ಗೂ ಕ್ರೋಮ್ ಲೈನಿಂಗ್ ನೀಡಲಾಗಿದೆ. ಇವುಗಳ ಜತೆಗೆ 2 ಹೆಚ್ಚುವರಿ ಬಣ್ಣಗಳಲ್ಲೂ ಕ್ಯೂ3 ಡೈನಾಮಿಕ್ ಲಭ್ಯವಾಗಲಿದೆ. ಆದರೆ ಈಗಿರುವ ಕ್ಯೂ3 ಗೂ ಹೊಸ ಕ್ಯೂ3 ಡೈನಾಮಿಕ್‌ಗೂ ರು. 1 ಲಕ್ಷ ವ್ಯತ್ಯಾಸವಿರಲಿದೆ, ಹಿಂದೊಮ್ಮೆ ಆಫ್‌ರೋಡ್‌ನಲ್ಲಿ ಕ್ಯೂ3 ಓಡಿಸಿದ ಅನುಭವದ ಬಗ್ಗೆ ಇದೇ ಪುಟದಲ್ಲಿ ಬರೆಯಲಾಗಿತ್ತು. ಆದರೆ ಕ್ಯೂ3ಯನ್ನು ರೇಸ್ ಟ್ರ್ಯಾಕ್ ನಲ್ಲಿ ಅಥವಾ ಅವರ ವೇಗವನ್ನು ಪರೀಕ್ಷೆಗೊಳಪಡಿಸುವ ಅವಕಾಶ ಸಿಕ್ಕಿರಲಿಲ್ಲ. ಕ್ಯೂ 3 ಡೈನಾಮಿಕ್ ಜತೆ ಒಂದಿಡೀ ದಿನ ಕಳೆಯುವ ಅವಕಾಶ ಕನ್ನಡಪ್ರಭಕ್ಕೆ ಲಭ್ಯವಾಗಿತ್ತು. ಕೂ3 ಡೈನಾಮಿಕ್ ಕಾರನ್ನು ಕೊಯಂಬತ್ತೂರಿನ ರೇಸ್ ಟ್ರ್ಯಾಕ್‌ನಲ್ಲಿ ಹಾಗೂ ಅದರ ಪಕ್ಕದಲ್ಲೇ ವಿಶೇಷವಾಗಿ ನಿರ್ಮಿಸಲಾಗಿದ್ದ ಆಫ್ ರೋಡಿಂಗ್ ಟ್ರ್ಯಾಕ್‌ನಲ್ಲಿ ಕ್ಯೂ3 ಓಡಿಸಿ ಪಿರೀಕ್ಷಿಸುವ, ವೇಗವಾಗಿ ಝಿಗ್ ಝಾಗ್ ರೀತಿಯಸ್ಸಿ ಚಲಾಯಿಸುತ್ತ, ವಾಹನದ ಸಮತೋಲನ, ಎಬಿಎಸ್‌ನ ಸಾಮರ್ಥ್ಯ , ಕಂಫರ್ಟ್ ಮತ್ತು ಡೈನಾಮಿಕ್ ಡ್ರೈವ್ ಸೆಲೆಕ್ಟ್‌ಗಳ ನಡುವಿನ ವ್ಯತ್ಯಾಸಗಳನ್ನು ಪರೀಕ್ಷೆಗಳೊಪಡಿಸಲು ಅವಕಾಶ ನೀಡಲಾಗಿತ್ತು. ಅದು ಮೂರು ಪರೀಕ್ಷೆಗಳಲ್ಲೂ ಕ್ಯೂ 3 ಫಸ್ಟ್ ರ್ಯಾಂಕ್‌ನಲ್ಲಿ ಪಾಸ್ ಎಂಬುದು ಎಲ್ಲರಿಗೂ ಗೊತ್ತೇ ಇದೆ. ರೇಸ್ ಟ್ರ್ಯಾಕ್‌ನಲ್ಲಿ ಕ್ಯೂ3ಯನ್ನು ವೇಗವಾಗಿ ತಿರುಗಿಸಿದರೂ ಟಯರ್ ಡ್ರ್ಯಾಗ್ ಆದ ಶಬ್ದ ಬರುತ್ತದೆಯೇ ಹೊರತು ಕಾರು ದಾರಿ ಬಿಟ್ಟು ಕದಲುವುದಿಲ್ಲ. ಓಡಿಸುವವನು ಹೆದರಿ ನಿಯಂತ್ರಣ ಕಳೆದುಕೊಳ್ಳಬೇಕೇ ಹೊರತು ಕ್ಯೂ 3 ಯಾವುದೇ ಕಾರಣಕ್ಕೂ ನಿಯಂತ್ರಣಕ್ಕೆ ಸಿಗದಂತೆ ಆಗುವುದಿಲ್ಲ. ಅತಿವೇಗದಲ್ಲಿ ಬಂದು ಬ್ರೇಕ್ ಹಾಕುತ್ತಲೇ ತಿರುಗಿಸಿದರೂ ಕಾರು ಅತ್ಯಂತ ಸಲೀಸಾಗಿ ತಿರುವುಗಳನ್ನು ದಾಟಿ ಮುನ್ನುಗ್ಗುತ್ತದೆ. ಆಡಿ ಕಂಪನಿ ಭಾರತದಲ್ಲಿ ಅತಿಹೆಚ್ಚು ಮಾರಾಟ ಮಾಡಿರುವ ಕಾರೆಂದರೆ ಕ್ಯೂ 3. ಐಶಾರಾಮಿಗೆ, ಎಸ್‌ಯುವಿಗಾಗಿ , ವೇಗಕ್ಕೆ ಮತ್ತು ಸ್ಟೇಟಸ್ ಸಿಂಬಾಲ್ ಎಲ್ಲವೂ ಒಂದೇ ಕಾರಿನಿಂದ ಪೂರೈಸಿಕೊಳ್ಳಬಹುದು. ಅಲ್ಲದೆ ಕ್ಯೂ 3 ಗಾತ್ರವೂ ಭಾರತಕ್ಕೆ ಹೇಳಿ ಮಾಡಿಸಿದಂತಿದೆ. ನಗರ ಪ್ರದೇಶದ ಓಡಾಟಕ್ಕೂ ಸೂಕ್ತವಾಗಿದೆ. ಹಾಗಂತ ಯಾವುದಕ್ಕೂ ಜಾಗದ ಕೊರತೆಯಿಲ್ಲ. ಜನ ಕಡಿಮೆ ಇದ್ದರೆ ಸೀಟು ಮಡಚುವ ಅವಕಾಶವನ್ನೂ ನೀಡಲಾಗಿದೆ.