ನ್ಯಾನೊ ಟ್ವಿಸ್ಟ್ಗೆ ಪವರ್ ಡೀಸೆಲ್ ಕಾರನ್ನು ಬಿಡುತ್ತೇವೆ ಎಂದು ಕಳೆದೊಂದು ವರ್ಷದಿಂದ ಹೇಳಿಕೊಳ್ಳುತ್ತಿದ್ದ ಟಾಟಾ ನ್ಯಾನೋ, ಈಗ ನ್ಯಾನೋ ಟ್ವಿಸ್ಟ್ ಅನ್ನು ಮಾರುಕಟ್ಟೆಗೆ ಬಿಡುತ್ತಿದೆ. ಗ್ರಾಹಕರ ಬೇಡಿಕೆಗೆ ತಕ್ಕಂತೆ ಕಳೆದ 2009ರಿಂದಲೂ ಪ್ರತಿವರ್ಷವೂ ನ್ಯಾನೋ ಕಾರಿನಲ್ಲಿ ಸಣ್ಣಪುಟ್ಟ ಬದಲಾವಣೆ ಮಾಡುತ್ತಲೇ ಬರಲಾಗಿತ್ತು. ಕಾರಿನಲ್ಲಿ ಪ್ರತಿ ಚಾಲಕನೂ ಬಯಸುವ ಪವರ್ ಸ್ಟೇರಿಂಗ್ನ್ನು ಈಗ ನೀಡಲು ಟಾಟಾ ಮುಂದಾಗಿದೆ. ಪ್ರಸ್ತುತ ಹೈಯರ್ ಎಂಡ್ ಕಾರಿನ ದರಕ್ಕಿಂತ 13 ಸಾವಿರ ಹೆಚ್ಚಿನ ದರದಲ್ಲಿ ನ್ಯಾನೋ ಟ್ವಿಸ್ಟ್ ಲಭ್ಯವಾಗಲಿದೆ. 2009ರ ಬಳಿಕ ಸಸ್ಪೆನ್ಷನ್, ಸೀಟ್, ಅರ್ಗೋನಾಮಿಕ್ಸ್, ಎಂಜಿನ್ ಮತ್ತು ಗೇರ್ಬಾಕ್ಸ್ಗಳನ್ನು ಟ್ಯೂನ್ ಮಾಡುತ್ತಲೇ ಬರಲಾಗಿತ್ತು. ಈಗ ಬಾಷ್ ಕಂಪನಿಯ ಸಹಯೋಗದೊಂದಿಗೆ ಪವರ್ ಸ್ಟೇರಿಂಗ್ ರೂಪಿಸಲಾಗಿದೆ. ಪವರ್ ಸ್ಟೇರಿಂಗ್ ಇಲ್ಲದ ಕಾರಣದಿಂದ 80 ಕಿ.ಮೀಗೂ ಅಧಿಕ ವೇಗ ಹೋಗುವಾದ ಹೆದರಿಕೆಯಾಗುತ್ತದೆ ಎಂಬ ಆರೋಪವಿತ್ತು. ನಗರ ಚಾಲನೆಯಲ್ಲಿ ಚಾಲಕರು ಕಷ್ಟಪಡಬೇಕಾಗುತ್ತಿತ್ತು. ಒಟ್ಟಿನಲ್ಲಿ ನ್ಯಾನೋವನ್ನು ಒಂದು ಪರಿಪೂರ್ಣ ಸಿಟಿ ಕಾರನ್ನಾಗಿ ಪರಿವರ್ತಿಸಲು ವರ್ಷದಿಂದ ವರ್ಷಕ್ಕೆ ಟಾಟಾ ಸಂಸ್ಥೆ ಹರಸಾಹಸ ಪಡುತ್ತಿದೆ. ಹಾಗೆಯೇ ವಿಶ್ವದ ಅತಿ ಅಗ್ಗದ ಕಾರು ಎಂಬ ಹೆಗ್ಗಳಿಕೆಗೆ ಈ ಕಾರು ಪಾತ್ರವಾಗಿತ್ತು. ಆದರೆ ಈಗ ನ್ಯಾನೋ ಟ್ವಿಸ್ಟ್ಗೆ ಬರೋಬ್ಬರಿ 2.50 ಲಕ್ಷವಾಗುತ್ತದೆ.