ಕಿಯಾ ಸ್ಪೋರ್ಟೇಜ್ ಅದೇ ಕಂಪನಿ. ಅದೇ ಹೆಸರು. ಬೇರೆ ಆಯ್ಕೆಗಳೇ ಇಲ್ಲ ಎನ್ನುವರಿಗೆ ಕಿಯಾ ಸ್ಪೋರ್ಟೇಜ್ ಅತ್ಯಂತ ಹೊಸತನದ ಆಯ್ಕೆಯಾಗಿ ಪರಿಣಮಿಸುವ ಸಾಧ್ಯತೆಗಳು ಹೆಚ್ಚಿವೆ. ಕಿಯಾ ಕಂಪನಿ ಬಹು ವರ್ಷಗಳಿಂದ ಭಾರತೀಯ ಮಾರುಕಟ್ಟೆ ಪ್ರವೇಶಿಸಲು ಯೋಚಿಸುತ್ತಿದೆ. ಬಹುಶಃ ಹೊಸದಾಗಿ ಮಾರುಕಟ್ಟೆ ಪ್ರವೇಶಿಸಬಯಸುವ ಕಿಯಾ ಸಂಸ್ಥೆಗೆ ಮಿನಿ ಎಸ್‌ಯುವಿಗಿಂತ ಉತ್ತಮ ಮಾರುಕಟ್ಟೆ ಬೇರೊಂದಿಲ್ಲ. ಇದಕ್ಕೆ ತಕ್ಕಂತೆ ಕಿಯಾಕಂಪನಿಯ ಬಳಿ ಸ್ಪೋರ್ಟೇಜ್ ಎಂಬ ಮಿನಿ ಎಸ್‌ಯುವಿ ವಾಹನವಿದೆ. ಅದನ್ನೇ ಭಾರತದಲ್ಲಿ ಮಾರುಕಟ್ಟೆಗೆ ಇಳಿಸಿದರೆ ಯಶಸ್ವಿಯಾಗುವುದರಲ್ಲಿ ಅನುಮಾನವಿಲ್ಲ. ಕಿಯಾ ಸ್ಪೋರ್ಟೇಜ್ ಹುಲಿಯ ಮೂಗಿನ ವಿನ್ಯಾಸದ ಮುಂಭಾಗ ಹೊಂದಿದ್ದು, ಈಗ ಭಾರತೀಯ ಮಾರುಕಟ್ಟೆಯಲ್ಲಿರುವ ಎಲ್ಲ ಕಾರುಗಳಿಗಿಂತ ವಿಶಿಷ್ಟವಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಿಯಾ ಸ್ಪೋರ್ಟೇಜ್ 1.7 ಲೀ. ಸಿಆರ್‌ಡಿಇ ಎಂಜಿನ್ ಹೊಂದಿದೆ. ಆದರೆ ಭಾರತೀಯ ಮಾರುಕಟ್ಟೆಯಲ್ಲಿ ಮೈಲೇಜ್‌ಗಾಗಿ ಎಂಜಿನ್ ಸಾಮರ್ಥ್ಯವನ್ನು ಕೊಂಚ ಕಡಿಮೆ ಮಾಡುವ ಅನುಮಾನವೂ ಇದೆ. ಆದರೆ ಇದು ಸಣ್ಣ ಕಾರುಗಳ ಮಿತಿಯಾದ 4 ಮೀಟರ್ ಉದ್ದ ದಾಟಲಿರುವುದರಿಂದ ಕೊಂಚ ದುಬಾರಿಯಾಗಬಹುದು ಎಂದೂ ಹೇಳಲಾಗುತ್ತಿದೆ. - ವಕ್ರದಂತ