ಫೋರ್ಡ್‌ನ ಪರಿಸರ ಪಾಠ ಫೋರ್ಡ್ ಈಗ ಪರಿಸರ ಸ್ನೇಹಿ. ಭಾರತೀಯ ಕಾರು ಮಾರುಕಟ್ಟೆಯಲ್ಲಿ ವೇಗದ ಬೆಳವಣಿಗೆ ಕಾಣುತ್ತಿರುವ ಈ ಸಂಸ್ಥೆತನ್ನ ಉತ್ಪಾದನಾ ಘಟಕಗಳಲ್ಲಿ ವಿದ್ಯುತ್ ಹಾಗೂ ನೀರು ಬಳಕೆಯನ್ನು ಇಳಿಸಲು ಮುಂದಾಗಿದೆ. ಇದರ ಜತೆಗೆ ಕಾರುಗಳು ಉಗುಳುವ ಹೊಗೆ ಪ್ರಮಾಣವೂ ಕಡಿಮೆಗೊಳಿಸಲಾಗುತ್ತಿದೆ. ಫೋರ್ಡ್ ಚೆನ್ನೈ ಘಟಕದಲ್ಲಿ ಬಳಸುವ ಎಲ್ಲ ನೀರನ್ನು ಸಂಸ್ಕರಿಸಿ ಮರು ಬಳಸುತ್ತಿದೆ. ಇದರ ಜತೆಗೆ ಪ್ರತಿ ಕಾರಿಗೆ ಶೇ.30ರಷ್ಟು ನೀರು ಕಡಿಮೆ ಬಳಸಲಾಗುತ್ತಿದೆ. ಇದರ ಜತೆಗೆ ಘಟಕದಲ್ಲಿ ಬಳಸಲಾಗುವ ವಿದ್ಯುತ್ ಪ್ರಮಾಣವೂ ಶೇ.10ರಷ್ಟು ಕಡಿಮೆ ಮಾಡಲಾಗುತ್ತಿದೆ. ಜಗತ್ತಿನಾದ್ಯಂತ ಎಲ್ಲ ಘಟಕಗಳಲ್ಲಿ ಇಂಥದ್ದೇ ಕ್ರಮಕ್ಕೆ ಫೋರ್ಡ್ ಮುಂದಾಗಿದೆ.