ಒಂದೆಂಟ್ಲ ಎಂಟು ಒಂದು ಬೀಜದಿಂದ ಒಂದು ಸಸಿ ಚಿಗುರುವುದು ಸಾಮಾನ್ಯ ಸಂಗತಿ. ಅಪರೂಪಕ್ಕೆ ಎರಡು, ಮೂರು ಸಸಿಗಳು ಹುಟ್ಟಿದ್ದನ್ನೂ ನಾವು ಕೇಳಿದ್ದೇವೆ. ಉತ್ತರಕನ್ನಡ ಜಿಲ್ಲೆ ಯಲ್ಲಾಪುರ ತಾಲ್ಲೂಕಿನ ಉಮ್ಮಚಗಿ ನಿವಾಸಿ ಗಣೇಶ ಗೋವಿಂದ ನಾಯ್ಕರ ಮನೆ ಅಂಗಳದಲ್ಲಿ ತಿಂದು ಬಿಸಾಡಲಾಗಿದ್ದ ಮಾವಿನ ಒರಟೆಯಲ್ಲಿ ಎಂಟು ಸಸಿ ಚಿಗುರಿ ಅಚ್ಚರಿ ಮೂಡಿಸಿದೆ. - ಶಂಕರ ಭಟ್ ತಾರೀಮಕ್ಕಿ