ವೆಸ್ಪಾ ವಿಕ್ಸ್ ಪಿಯಾಜಿಯೋ ಕಂಪನಿಯ 'ವೆಸ್ಪಾ' ಸ್ಕೂಟರ್ ಇಷ್ಟ ಪಡುವವರಿಗಾಗಿ ಮತ್ತಷ್ಟು ಮಜಾ ಮತ್ತು ಹೆಚ್ಚು ಫ್ಯೂಚರ್ಸ್ ಉಳ್ಳ 'ವೆಸ್ಪಾ ವಿಕ್ಸ್‌' ಇದೀಗ ಮಾರುಕಟ್ಟೆಗೆ ಬಂದಿದೆ. ಭಾರತೀಯ ವಾಹನ ಸವಾರರಿಗಾಗಿಯೇ ತಯಾರಿಸಿದ ಈ ಸ್ಕೂಟರ್ ತನ್ನ ಅತ್ಯಾಕರ್ಷಕ ಬಣ್ಣ ಮತ್ತು ನವೀನ ಫ್ಯೂಚರ್ಸ್‌ಗಳಿಂದ ಗ್ರಾಹಕರನ್ನು ಆಕರ್ಷಿಸುವುದರಲ್ಲಿ ಅನುಮಾನವೇ ಇಲ್ಲ. ಈಗಾಗಲೇ ಯುರೋಪಿಯನ್ ದೇಶಗಳು ಮತ್ತು ಅಮೆರಿಕದಲ್ಲಿ ಸಾಕಷ್ಟು ಬೇಡಿಕೆ ಸೃಷ್ಟಿಸಿದೆ. ಡಿಸ್ಕ್ ಬ್ರೇಕ್, ಟ್ಯೂಬ್‌ಲೆಸ್ ಟಯರ್, ಹೆಚ್ಚಿನ ಕಂಫರ್ಟ್ ಮತ್ತು ಗ್ರಿಪ್ ನೀಡಲು ಸ್ಕೂಟರ್ ಹ್ಯಾಂಡಲ್‌ಗೆ ರಬ್ಬರ್ ಗ್ರಿಪ್ ಮತ್ತು ಉದ್ದನೆಯ ಸೀಟ್ ಅಳವಡಿಸಲಾಗಿದೆ. ಯಾವುದೇ ಗೇರ್ ಮೋಟರ್ ಬೈಕ್‌ಗೆ ಕಮ್ಮಿ ಇಲ್ಲ ಎಂದು ಹೇಳಲು ವೆಸ್ಪಾ125 ಸಿಸಿ ಎಂಜಿನ್ ಮತ್ತು ಫೋರ್‌ಸ್ಟ್ರೋಕ್ ಸಾಮರ್ಥ್ಯ ಹೊಂದಿದೆ. ಇಂದಿನ ಕಲುಷಿತ ವಾತಾವರಣವನ್ನು ಮತ್ತಷ್ಟು ಕಲುಷಿತಗೊಳಿಸಬಾರದು ಎಂಬ ಉದ್ದೇಶದಿಂದ ಪರಿಸರ ಸ್ನೇಹಿ ಎಂಜಿನ್ ಅಳವಡಿಸಲಾಗಿದೆ. ಪ್ರತಿ 1ಲೀಟರ್ ಪೆಟ್ರೋಲ್‌ಗೆ 60 ಕಿ.ಲೋ ಮೀಟರ್ ಮೈಲೇಜ್ ನೀಡುವ ಸಾಧ್ಯತೆ ಇದೆ. ಬ್ಲೂ, ಗ್ರೇ, ವೈಟ್, ಸಿಲ್ವರ್, ರೆಡ್ ಬಣ್ಣಗಳಲ್ಲಿ ಲಭ್ಯವಿದೆ. ಈ ಸ್ಕೂಟರ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದ ಪಿಯಾಜಿಯೋ ಕಂಪನಿಯ ಅಧ್ಯಕ್ಷ ರವಿ ಛೋಪ್ರಾ, ಭಾರತೀಯ ಮಾರುಕಟ್ಟೆಯಲ್ಲಿ ಈ ನೂತನ ಸ್ಕೂಟರ್ ಹೊಸದೊಂದು ಬೇಡಿಕೆಯನ್ನೇ ಸೃಷ್ಟಿಸಿದೆ. ಯುವಕರಿಗೆ ಹೆಚ್ಚು ಇಷ್ಟವಾಗುವಂತೆ ರೂಪಿಸಲಾಗಿದೆ. ನೂತನ ಫ್ಯೂಚರ್ಸ್‌ಗಳು ವಾಹನ ಸವಾರರಿಗೆ ಉತ್ತಮ ರೈಡಿಂಗ್ ಕಂಫರ್ಟ್ ನೀಡಲಿದೆ. ಮೊದಲ ಬಾರಿಗೆ ವೆಸ್ಪಾ ಮಾರುಕಟ್ಟೆಗೆ ಬಿಡುಗಡೆ ಮಾಡಿದಾಗ ಹೆಚ್ಚಿನ ಬೇಡಿಕೆ ಬಂತು. ಈ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಮತ್ತಷ್ಟು ಪ್ಯೂಚರ್ಸ್ ಉಳ್ಳ ಸ್ಕೂಟರ್ ನೀಡಬೇಕೆಂಬ ಉದ್ದೇಶದಿಂದ 2ನೇ ಹಂತದಲ್ಲಿ ಈ ನೂತನ ಸ್ಕೂಟರ್ ಬಿಡುಗಡೆ ಮಾಡಲಾಗಿದೆ ಎಂದರು. ವಿಶ್ವದ್ಯಾದಂತ 18 ಮಿಲಿಯನ್ ಜನರು ವೆಸ್ಪಾ ಸ್ಕೂಟರ್ ಹೊಂದಿದ್ದಾರೆ.