ಬದಲಾದ ಆರ್ಟಿಗಾ ಹೋಂಡಾ ಮೋಬಿಲಿಯೋ ಬಿಡುಗಡೆಗೆ ಸಿದ್ಧವಾಗುತ್ತಿದ್ದಂತೆ ಮಾರುತಿ ಅರ್ಟಿಗಾ ಲಿಮಿಟೆಡ್ ಎಡಿಷನ್ ಮಾರುಕಟ್ಟೆಗೆ ಬರುತ್ತಿದೆ. ಆಂತರಿಕ ಹಾಗೂ ಬಾಹ್ಯ ವಿನ್ಯಾಸದಲ್ಲಿ ಕೆಲ ಬದಲಾವಣೆ ಮಾಡಿ ಈ ಕಾರು ಬಿಡಲಾಗುತ್ತಿದೆ. ಮಾರುಕಟ್ಟೆಯಲ್ಲಿ ಒಂದೂವರೆ ಲಕ್ಷ ಸಂಖ್ಯೆ ತಲುಪಿದ ಸಂಭ್ರಮವನ್ನು ಈ ಮೂಲಕ ಆಚರಿಸಲೂ ಕಂಪನಿ ನಿರ್ಧರಿಸಿದೆ. ಗ್ರಿಲ್, ಕನ್ನಡಿ, ಡೋರ್ ಹ್ಯಾಂಡಲ್, ಗ್ರಾಫಿಕ್ಸ್, ರೇರ್ ಕ್ಯಾಮೆರಾ, ಆಸನ ಹಾಗೂ ಆಂತರಿಕ ವಿನ್ಯಾಸದ ಬಣ್ಣ ಬದಲಿಸಲಾಗಿದೆ. ಲಿಮಿಟೆಡ್ ಎಡಿಷನ್‌ನ ಡೀಸೆಲ್ ಕಾರಿನ ದರ ರು. 8.05 ಲಕ್ಷ ಹಾಗೂ ಪೆಟ್ರೋಲ್ ಎಂಜಿನ್ ಕಾರಿನ ಬೆಲೆ ರು. 6.76 ಲಕ್ಷವಿರುತ್ತದೆ.