ಜಿಎಂ ಮುಖಭಂಗ ಜನರಲ್ ಮೋಟಾರ್ಸ್, ಅಮೆರಿಕದ ಬೃಹತ್ ಅಟೋಮೊಬೈಲ್ ತಯಾರಿಕೆ ಕಂಪನಿ. ಅದು ಇತ್ತೀಚೆಗೆ ತಾನು ತಯಾರಿಸಿ ಮಾರುಕಟ್ಟೆಗೆ ಬಿಟ್ಟ 3.4 ಲಕ್ಷ ಶೆವರ್ಲೆ ಕ್ರೂಝ್ ಕಾರುಗಳನ್ನು ವಾಪಸು ಪಡೆದುಕೊಂಡಿತು. ಕಾರಣವೇನು ಗೊತ್ತೆ? ಬ್ರೇಕ್‌ನಲ್ಲಿ ಸಮಸ್ಯೆ ಕಂಡುಬಂದದ್ದು. ಬಡಪೆಟ್ಟಿಗೆ ಹಾಗೆಲ್ಲ ಮಾಡುವ ಕಂಪನಿಯಲ್ಲ ಅದು. ಬ್ರೇಕ್‌ನ ಸಮಸ್ಯೆ ಸೀರಿಯಸ್ ಆದ್ದರಿಂದ, ಮಾರಣಾಂತಿಕವಾಗಬಲ್ಲುದಾಗಿದ್ದರಿಂದ ಹಾಗೆ ಮಾಡಿದೆ. ನಷ್ಟವಾದರೂ ಚಿಂತೆಯಿಲ್ಲ, ಹೆಸರು ಹಾಳಾಗಬಾರದೆಂಬ ಕಾಳಜಿ.