ಮಾಡರ್ನ್ ವಿಸ್ತಾ ಪ್ರತಿಷ್ಠಿತ ಟಾಟಾ ಸಂಸ್ಥೆಯ ವಿಸ್ತಾ ಕಾರು ತನ್ನ ಸ್ವರೂಪ ಬದಲಿಸಿಕೊಂಡು ಫೆಬ್ರವರಿ ತಿಂಗಳಲ್ಲಿ ಮಾರುಕಟ್ಟೆಗೆ ಬರುವ ಸಾಧ್ಯತೆಯಿದೆ. ಟಾಟಾ ಮಾಂಝಾ ಕಾರಿನ ಇಂಟಿರೀಯರ್‌ನ್ನು ವಿಸ್ತಾದಲ್ಲಿ ಅಳವಡಿಸಲಾಗಿದೆ. ಟಚ್ ಸ್ಕ್ರೀನ್ ಕನ್ಸೋಲ್ ಹಾಗೂ ನೆವಿಗೇಷನ್ ವ್ಯವಸ್ಥೆಯನ್ನು ಸೇರಿಸಲಾಗಿದೆ. ಇದಲ್ಲದೇ ಲೆದರ್ ಸೀಟುಗಳನ್ನು ಹಾಕಲಾಗಿದ್ದು, ಸ್ಪೋರ್ಟಿ ಲುಕ್ ನೀಡುವ ಪ್ರಯತ್ನ ಮಾಡಲಾಗಿದೆ ಎಂದು ಟಾಟಾ ಮೂಲಗಳು ತಿಳಿಸಿವೆ. ಫೀಯಟ್ ಎಂಜಿನ್ ಉಳಿಸಿಕೊಂಡು ಕೆಲ ಸಣ್ಣಪುಟ್ಟ ಬದಲಾವಣೆ ಮಾಡಿ ಮಾರುಕಟ್ಟೆಗೆ ತರಲಾಗುತ್ತಿದೆ. ದರದಲ್ಲಿಯೂ ಬದಲಾವಣೆಯಾಗುವ ಸಾಧ್ಯತೆಯಿದೆ.