ರು. 4 ಲಕ್ಷಕ್ಕಿಂತ ಕಡಿಮೆ ಬೆಲೆಯ ಬೆಸ್ಟ್ ಕಾರುಗಳು ರು.4 ಲಕ್ಷಕ್ಕಿಂತ ಕಡಿಮೆ ಬಜೆಟ್‌ನಲ್ಲಿ ಸಿಗುವ ಬೆಸ್ಟ್ ಕಾರು ಯಾವುದು? ಇಲ್ಲಿದೆ ಉತ್ತರ... ಒಂದು ಕಾರು ಖರೀದಿ ಮಾಡುವ ಮುನ್ನ ನಾವು ಅದೆಷ್ಟು ಯೋಚಿಸುತ್ತೇವೆ ಅಲ್ವಾ? ಇಂಜಿನ್ ಕಾರ್ಯಕ್ಷಮತೆ, ಕಂಫರ್ಟ್ ಜತೆಗೆ ನಮ್ಮ ಬಜೆಟ್‌ಗೆ ಹೊಂದುವಂಥ ಕಾರುಗಳನ್ನು ನಾವು ಖರೀದಿಸಲು ಮುಂದಾಗುತ್ತೇವೆ. 4 ಲಕ್ಷಕ್ಕಿಂತ ಕಡಿಮೆ ಬಜೆಟ್‌ನಲ್ಲಿ ಸಿಗುವ ಬೆಸ್ಟ್ ಕಾರು ಯಾವುದು? ಇಲ್ಲಿದೆ ಉತ್ತರ ಮಾರುತಿ ಸುಜುಕಿ ಆಲ್ಟೋ ಕೆ 10 ಆಲ್ಟೋ ಕಾರಿನ ಹೊಸ ಆವೃತ್ತಿಯೆಂದೇ ಇದನ್ನು ಹೇಳಬಹುದು. 998 ಸಿಸಿ ಇಂಜಿನ್, 24.07 ಕಿಮೀ ಮೈಲೇಜ್. ಆಟೋಮ್ಯಾಟಿಕ್ ಮಾಡೆಲ್ ಕೂಡಾ ಲಭ್ಯ. ಡೀಸೆಲ್ ಇಂಜಿನ್ ಅಲ್ಲದೆ ಸಿಎನ್‌ಜಿ ಲಭ್ಯ. ದಾಟ್ಸನ್ ಗೋ ಮತ್ತು ಗೋ ಪ್ಲಸ್ದಾಟ್ಸನ್ ಗೋ ಎಂಬ ಹ್ಯಾಚ್‌ಬ್ಯಾಕ್ ಮತ್ತು ಗೋ ಪ್ಲಸ್ ಸಾಮಾನ್ಯ ಜನರ ಬಜೆಟ್ ಗೆ ಅನುಕೂಲವಾದ ಕಾರಾಗಿದೆ. 1.2 ಲೀಟರ್ ಪೆಟ್ರೋಲ್ ಇಂಜಿನ್ ಕಾರ್ಯಕ್ಷಮತೆಯಿರುವ ಈ ಕಾರಿಗೆ 20.62 ಕಿಮೀ ಮೈಲೇಜ್ ಇದೆ. ಹುಂಡೈ ಇಯೋನ್ಫ್ಯೂಡಿಕ್ ಡಿಸೈನ್ ಹೊಂದಿರುವ ಈ ಕಾರಿನ ವಿಶೇಷತೆ ಎಂದರೆ 1 ಲೀಟರ್ 3 ಸಿಲಿಂಡರ್ 814 ಸಿಸಿ ಇಂಜಿನ್. ಮೈಲೇಜ್ 20.3 ಕಿಮೀ. ಮಾರುತಿ ಸುಜುಕಿ ಸೆಲಾರಿಯೋಸುಜುಕಿ ಎ ಸ್ಟಾರ್ ಮತ್ತು ಎಸ್ಟಿಲೋ ಕಾರಿನ ಬದಲಿಗೆ ಬಂದ ಸೆಲಾರಿಯೋ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಇರುವ ಕಾರಾಗಿದೆ. ಮೈಲೇಜ್ 23.1 ಕಿಮೀ. ಈಗ ಡೀಸೆಲ್ ಕಾರುಗಳೂ ಲಭ್ಯ. ಹುಂಡೈ ಐ 102007ರಲ್ಲಿ ಮಾರುಕಟ್ಟೆಗೆ ಬಂದ ಈ ಕಾರು ಹೆಚ್ಚಿನ ಜನಪ್ರಿಯತೆ ಗಳಿಸಿದೆ. 1.1 ಲೀಟರ್, 4 ಸಿಲಿಂಡರ್, ಪೆಟ್ರೋಲ್ ಇಂಜಿನ್, 19 ಕಿಮೀ ಮೈಲೇಜ್ ನೀಡುವ ಹುಂಡೈ ಐ 10 ಬೆಲೆ ನಾಲ್ಕು ಲಕ್ಷ ರು. ಗಿಂತ ಅಧಿಕವಾಗಿದ್ದರೂ ಸಾಮಾನ್ಯರ ಬಜೆಟ್‌ಗೆ ಹೊಂದುವ ಕಾರು ಎಂದು ಹೇಳಲ್ಪಡುತ್ತದೆ .