೨೬ ಅಡಿ ಉದ್ದದ ಕಾರು ವಿನ್ಯಾಸ ಮಾಡಿದ ಸುಧಾಕರ್; ಮತ್ತೊಂದು ದಾಖಲೆಗೆ ಪ್ರಯತ್ನ ಕಂಪ್ಯೂಟರ್, ಶೂ, ಫುಟ್ ಬಾಲ್, ಬದನೆ ಕಾಯಿ ಆಕಾರಗಳಲ್ಲಿ ಕಾರು ವಿನ್ಯಾಸ ಮಾಡಿ ನಿರ್ಮಿಸಿ ದಾಖಲೆ ಮಾಡಿರುವ ವಿನ್ಯಾಸಕಾರ ಕೆ ಸುಧಾಕರ್, ಈಗ ೨೬ ಅಡಿ ಉದ್ದದ ಹೈದರಾಬಾದ್: ಕಂಪ್ಯೂಟರ್, ಶೂ, ಫುಟ್ ಬಾಲ್, ಬದನೆ ಕಾಯಿ ಆಕಾರಗಳಲ್ಲಿ ಕಾರು ವಿನ್ಯಾಸ ಮಾಡಿ ನಿರ್ಮಿಸಿ ದಾಖಲೆ ಮಾಡಿರುವ ವಿನ್ಯಾಸಕಾರ ಕೆ ಸುಧಾಕರ್, ಈಗ ೨೬ ಅಡಿ ಉದ್ದದ ಕಾರು ನಿರ್ಮಿಸಿ ಮತ್ತೊಂದು ದಾಖಲೆ ನಿರ್ಮಿಸುವತ್ತ ದಾಪುಗಾಲು ಹಾಕಿದ್ದಾರೆ. ವಿಶ್ವದ ಅತಿ ದೊಡ್ಡ ತ್ರಿಚಕ್ರ ವಾಹನ ನಿರ್ಮಿಸಿದ್ದಕ್ಕೆ ಸುಧಾಕರ್ ಅವರು ಗಿನ್ನಿಸ್ ದಾಖಲೆ ಹೊಂದಿದ್ದಾರೆ. ೯ ಅಡಿ ತ್ರಿಜ್ಯದ ಚಕ್ರಗಳುಳ್ಳ, ೨೬ ಅಡಿ ಎತ್ತರದ, ೫೦ ಅಡಿ ಉದ್ದದ ಮತ್ತು ೧೦ ಅಡಿ ಅಗಲದ ಈ ಕಾರನ್ನು ೧೯೨೨ರ ಫೋರ್ಡ್ ಟೂರರ್ ಕಾರ್ ಮಾದರಿಯಲ್ಲಿ ವಿನ್ಯಾಸ ಮಾಡಿ ನಿರ್ಮಿಸಲಾಗಿದೆ. ಕಳೆದ ಮೂರು ವರ್ಷಗಳ ಪರಿಶ್ರಮದಿಂದ ಈ ಕಾರನ್ನು ನಿರ್ಮಿಸಿರುವುದಾಗಿ ತಿಳಿಸಿರುವ ಸುಧಾಕರ್ ಈ ವಿನ್ಯಾಸ ಮಕ್ಕಳನ್ನು ಸೆಳೆಯಲಿದೆ ಎಂದಿದ್ದಾರೆ. ಈ ಮಾದರಿ ಕಾರು ಅವರ ಸಂಗ್ರಹಾಲಯದಲ್ಲಿ ವೀಕ್ಷಣೆಗೆ ಸಿದ್ಧವಾಗಿದೆ. ಸ್ಟೀಲ್ ಮತ್ತು ಅಲ್ಯುಮಿನಿಯಂ ಬಳಸಿ ನಿರ್ಮಿಸಲಾಗಿರುವ ಈ ಕಾರು ಹವಾನಿಯಂತ್ರಣವನ್ನು ಒಳಗೊಂಡಿದೆ. ಎರಡು ಅಂತಸ್ತುಗಳನ್ನು ಹೊಂದಿರುವ ಈ ಕಾರಿನ ಒಳಭಾಗದ ಮೇಲ್ಭಾಗದಲ್ಲಿ ಚೆಸ್ ಬೋರ್ಡ್ ವಿನ್ಯಾಸ ಮಾಡಲಾಗಿದೆಯಂತೆ!