ರಾಮನಗಿಂಡಿ ಕರಾವಳಿ ತೀರವೇ ಹಾಗೆ. ಪ್ರವಾಸಿಗರ ಸ್ವರ್ಗ. ಅರಬ್ಬಿಸಮುದ್ರ ನಿರ್ಮಿಸಿದ, ರೋಮಾಂಚನ ನೀಡುವ ಕಡಲ ಕಿನಾರೆಗಳಂತೂ ಅದ್ಭುತ. ಕರಾವಳಿ ತೀರವೇ ಹಾಗೆ. ಪ್ರವಾಸಿಗರ ಸ್ವರ್ಗ. ಅರಬ್ಬಿಸಮುದ್ರ ನಿರ್ಮಿಸಿದ, ರೋಮಾಂಚನ ನೀಡುವ ಕಡಲ ಕಿನಾರೆಗಳಂತೂ ಅದ್ಭುತ. ಕೆಲವೊಂದು ಕಿನಾರೆಗಳಂತೂ ಸಹಜ ಸೌಂದರ್ಯದಿಂದ ಕಂಗೊಳಿಸುತ್ತಿದ್ದರೂ ಪ್ರವಾಸಿಗರಿಂದ ದೂರವೇ ಉಳಿದಿವೆ. ಅಂತಹ ಕಡಲಕಿ ನಾರೆಗಳಲ್ಲಿ ಈ ರಾಮನಗಿಂಡಿ ಕಿನಾರೆಯೂ ಒಂದು. ಸುಮಾರು 300 ಅಡಿಗಳ ಎತ್ತರದ ಗುಡ್ಡದಿಂದ ಕಾಣುವ ಇಲ್ಲಿಯ ಸಮುದ್ರದ ದೃಶ್ಯವಂತೂ ವ್ಹಾವ್... ವರ್ಣನಾತೀತ. ಸೂರ್ಯಾಸ್ತದ ನೋಟ ನಯನಮನೋಹರ. ಗುಡ್ಡವಿಳಿದು ಬೀಚ್ ಪ್ರವೇಶಿಸಿದರೆ ಪ್ರಶಾಂತವಾದ ಕಡಲು ನಮ್ಮೆಲ್ಲ ಚಿಂತೆಯನ್ನೂ ಮರೆಸುವಂತಿದೆ. ಆದರೆ, ಪ್ರಶಾಂತ ಕಡಲೆಂದು ನೀರಿಗಿಳಿಯದಿರಿ, ತುಂಬಾ ಆಳವಿರುವುದರಿಂದ ಅಪಾಯ ಜಾಸ್ತಿ. ಹೋಗೋದು ಹೇಗೆ? ಕುಮಟಾ-ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿ ಧಾರೇಶ್ವರದಿಂದ ಸ್ವಲ್ಪ ಮುಂದಕ್ಕೆ ಸಾಗಿದರೆ ಬಲಗಡೆ ಬೆತ್ತಗೇರಿ ಕ್ರಾಸ್ ಸಿಗುತ್ತದೆ. ಅಲ್ಲಿಂದ ಸ್ವಲ್ಪ ಮುಂದೆ ಹೋಗಿ ಗುಡ್ಡವೇರಿದರೆ ಕಾಣಿಸುವುದು ಈ ನಿಸರ್ಗ ರಮಣೀಯ ತಾಣ. ಮುಂದಿನ ನಿಮ್ಮ ಕರಾವಳಿ ತೀರದ ಪ್ರವಾಸ ಪಟ್ಟಿಯಲ್ಲಿ ಈ ರಾಮನಗಿಂಡಿಯೂ ಸೇರಿರಲಿ. - ಎಲ್.ಎಂ.ಹೆಗಡೆ, ಸಾಗರ