ಮಾರುತಿ ಕಾರುಗಳ ಮಾರಾಟ ಶೇ.6 .4 ರಷ್ಟು ಏರಿಕೆ ಆಗಸ್ಟ್ ತಿಂಗಳಲ್ಲಿ ಮಾರುತಿ ಸುಜೂಕಿ ಸಂಸ್ಥೆಯ ಕಾರುಗಳ ಮಾರಾಟ ಶೇ.6.4 ರಷ್ಟು ಏರಿಕೆಯಾಗಿದೆ. ನವದೆಹಲಿ: ಆಗಸ್ಟ್ ತಿಂಗಳಲ್ಲಿ ಮಾರುತಿ ಸುಜೂಕಿ ಸಂಸ್ಥೆಯ ಕಾರುಗಳ ಮಾರಾಟ ಶೇ.6 .4 ರಷ್ಟು ಏರಿಕೆಯಾಗಿದೆ. ಆಟೋಮೊಬೈಲ್ ಉತ್ಪಾದಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಮಾರುತಿ ಸಂಸ್ಥೆಯಾ ಕಾರುಗಳ ಮಾರಾಟ ಕಳೆದ ವರ್ಷದಿಂದ ಗಣನೀಯವಾಗಿ ಏರಿಕೆ ಕಾಣುತ್ತಿದೆ. ಕಳೆದ ತಿಂಗಳು 117 ,864 ಯುನಿಟ್ ಗಳು ಮಾರಾಟವಾಗಿದ್ದು, 2014 ರ ಆಗಸ್ಟ್ ನಲ್ಲಿ 110,776 ಯುನಿಟ್ ಮಾರಾಟವಾಗಿತ್ತು. ಈ ವರ್ಷದ ಜುಲೈ ನಲ್ಲಿ 121,712 ಯುನಿಟ್ ಗಳು ಮಾರಾಟವಾಗಿ, ಮಾರುತಿ ಕಾರುಗಳ ಮಾರಾಟ ಶೇ.20 ರಷ್ಟು ಏರಿಕೆ ದಾಖಲಿಸಿತ್ತು. ದೇಶೀಯ ಮಾರುಕಟ್ಟೆಯಲ್ಲಿ ಮಾರುತಿ ಕಾರುಗಳ ಮಾರಾಟ ಉತ್ತಮವಾಗಿದ್ದರೂ, ಜುಲೈ ನಲ್ಲಿ ಏರಿಕೆಯಾಗಿದ್ದ ರಫ್ತು ಈ ತಿಂಗಳಲ್ಲಿ ಶೇ.11 .1 ಕ್ಕೆ ಕುಸಿದಿದೆ. ಕಳೆದ ತಿಂಗಳಲ್ಲಿ ಮಾರುತಿಯ ಪ್ಯಾಸೆಂಜರ್ ಕಾರ್ ಗಳ ಮಾರಾಟ ಶೇ.4 .4 ಕ್ಕೆ ಏರಿಕೆಯಾಗಿದೆ. ವ್ಯಾನ್ ವಿಭಾಗದಲ್ಲೂ ಮಾರಾಟ ಏರಿಕೆಯಾಗಿದೆ.