ಉನ್ನತ ಶ್ರೇಣಿ ಹ್ಯಾಚ್ಬ್ಯಾಕ್ ಕಾರು ವಿಭಾಗದಲ್ಲಿ ಟಾಟಾ ಮೋಟಾಸರ್್ ಮಾರುಕಟ್ಟೆಗೆ ಪರಿಚಯಿಸಿದೆ ಟಾಟಾ ಮೋಟಾಸರ್್, ಉನ್ನತ ಶ್ರೇಣಿಯ ಹ್ಯಾಚ್ಬ್ಯಾಕ್ ಕಾರುಗಳ ವಿಭಾಗದಲ್ಲಿ... ಬೆಂಗಳೂರು, 2014 ಜನವರಿ 21: ಟಾಟಾ ಮೋಟಾಸರ್್, ಉನ್ನತ ಶ್ರೇಣಿಯ ಹ್ಯಾಚ್ಬ್ಯಾಕ್ ಕಾರುಗಳ ವಿಭಾಗದಲ್ಲಿ ಅತ್ಯಾಧುನಿಕವಾದ ಹಾಗೂ ಬಹಳ ಶಕ್ತಿಶಾಲಿಯಾದ 'ವಿಸ್ಟಾ ವಿಎಕ್ಸ್ಟೆಕ್' ಕಾರನ್ನು ಇದೀಗ ರಾಜ್ಯದ ಮಾರುಕಟ್ಟೆಗೆ ಪರಿಚಯಿಸಿದೆ. ಜತೆಗೇ ಹೊಸ ಅಂಶಗಳೊಂದಿಗೆ, ಚಿತ್ತಾಕರ್ಷಕ ನೋಟದೊಂದಿಗೆ ನೂತನ ನ್ಯಾನೊ ಟ್ವಿಸ್ಟ್ ಸಹ ಅವತರಿಸಿದೆ. 'ವಿಸ್ಟಾ ವಿಎಕ್ಸ್ಟೆಕ್' ಕಾರು 75 ಪಿಎಸ್ ಶಕ್ತಿಯದ್ದಾಗಿದೆ. ಪ್ರಥಮ ಶ್ರೇಣಿಯ ಅತ್ಯಾಧುನಿಕ ತಂತ್ರಜ್ಞಾನಗಳನ್ನೊಳಗೊಂಡಿದೆ. ತಮ್ಮ ಕಾರು ಬಹಳ ಸುಂದರವಾಗಿರಬೇಕು, ಹಿತಕರ ಪ್ರಯಾಣ ಮತ್ತು ರೋಮಾಂಚನಕಾರಿ ಸವಾರಿಯ ಅನುಭವ ನೀಡುವಂತಿರಬೇಕು ಎಂದು ಬಯಸುವ ತಂತ್ರಜ್ಞಾನ ಪ್ರೇಮಿ ಗ್ರಾಹಕರಿಗಾಗಿಯೇ ವಿಸ್ಟಾ ಟೆಕ್ ಕಾರನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ವಿಸ್ಟಾ ಟೆಕ್ ಕಾರು, ಟಚ್ ಸ್ಕ್ರೀನ್ ಮಲ್ಟಿಮೀಡಿಯಾ ಸಿಸ್ಟೆಂ, ಜತೆಗೆ ಜಿಪಿಎಸ್ ನ್ಯಾವಿಗೇಷನ್, ಸುಲಭ ಚಾಲನೆ ತಂತ್ರಜ್ಞಾನ, ಚಾಲಕರಿಗೆ ಪ್ರಯಾಣದ ವೇಳೆ ಸಮಗ್ರ ಮಾಹಿತಿ ಒದಗಿಸುವ ವ್ಯವಸ್ಥೆ ಮೊದಲಾದ ಅತ್ಯಾಧುನಿಕ ತಂತ್ರಜ್ಞಾನದ ಸೌಲಭ್ಯಗಳನ್ನು ಒಳಗೊಂಡಿದೆ. ಅಷ್ಟೇ ಅಲ್ಲದೆ, ಮುಂಬದಿಯಲ್ಲಿ ಎರಡು ಬಗೆಯ ಸಸ್ಪೆನ್ಷನ್ಗಳಿವೆ. ಕಾರಿನ ಸಮಗ್ರ ನಿಯಂತ್ರಣ ಸೌಲಭ್ಯವನ್ನು ಸ್ಟೀರಿಂಗ್ ಚಕ್ರದಲ್ಲಿಯೇ ಅಳವಡಿಸಲಾಗಿದೆ. ಬ್ಲ್ಯೂ 5 ತಂತ್ರಜ್ಞಾನವನ್ನೊಳಗೊಂಡಿದೆ. ಇವೆಲ್ಲದರ ಜತೆಗೇ ಎ2 ಶ್ರೇಣಿಯ ಹ್ಯಾಚ್ಬ್ಯಾಕ್ ಕಾರುಗಳ ಸಾಲಿನಲ್ಲಿ ನಿಲ್ಲಿಸುವಂತಹ ಹತ್ತಾರು ವೈಶಿಷ್ಟ್ಯಪೂರ್ಣ ಸವಲತ್ತುಗಳೂ ವಿಸ್ಟಾ ವಿಎಕ್ಸ್ಟೆಕ್ ಕಾರಿನಲ್ಲಿವೆ. ಇದೇ ವೇಳೆ ಟಾಟಾ ಮೋಟಾಸರ್್, ಹೊಸ ವಿನ್ಯಾಸ ಮತ್ತು ವಿಶೇಷ ಸೌಲಭ್ಯಗಳನ್ನೊಳಗೊಂಡ ನ್ಯಾನೊ ಟ್ವಿಸ್ಟ್ನ ಹೊಸ ಮಾದರಿಯನ್ನೂ ಮಾರುಕಟ್ಟೆಗೆ ಪರಿಚಯಿಸಿದೆ. ನಗರದ ವಾಹನ ದಟ್ಟಣೆಯಲ್ಲಿ ಅಡೆತಡೆ ಇಲ್ಲದ ಪಯಣ, ಸರಳ ಚಾಲನೆ, ಸುಲಭ ನಿಯಂತ್ರಣದ ಸೌಲಭ್ಯಗಳಿರುವ ನೂತನ ನ್ಯಾನೊ ಟ್ವಿಸ್ಟ್ ಅದೇ ಕಾರಣವಾಗಿ ಈಗ "ಸ್ಮಾಟರ್್ ಸಿಟಿ ಕಾರು" ಎನಿಸಿಕೊಂಡು ರಸ್ತೆಗಿಳಿದಿದೆ. ಈ ಹೊಸ ಮಾದರಿ ನ್ಯಾನೊ ಕಾರು, ಪ್ರಥಮ ಶ್ರೇಣಿಯ ಎಲೆಕ್ಟ್ರಿಕ್ ಪವರ್ ಅಸಿಸ್ಟೆಡ್ ಸ್ಟೀರಿಂಗ್ (ಇಪಿಎಎಸ್) ಸೌಲಭ್ಯ ಹೊಂದಿದೆ. ಇದು ನಗರದೊಳಗಿನ ಭಾರಿ ಸಂಖ್ಯೆಯ ವಾಹನಗಳ ನಡುವಿನ ಸಂಚಾರವನ್ನೂ ಬಹಳ ಸುಲಭಗೊಳಿಸಲಿದೆ. ನಗರದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ನೂತನ ವಿಸ್ಟಾ ವಿಎಕ್ಸ್ಟೆಕ್ ಕಾರನ್ನು ರಾಜ್ಯದ ಮಾರುಕಟ್ಟೆಗೆ ಪರಿಚಯಿಸಿದ ಟಾಟಾ ಮೋಟಾಸರ್್ ಲಿ.ನ ಪ್ರಯಾಣಿಕ ವಾಹನಗಳ ವಿಭಾಗದ ಹಿರಿಯ ಉಪಾಧ್ಯಕ್ಷ ಅಂಕುಶ್ ಅರೋರಾ, "ಟಾಟಾ ಮೋಟಾಸರ್್ ಕಂಪೆನಿ ಪ್ರತಿಯೊಂದು ಹೊಸ ವಾಹನವನ್ನು ಮಾರುಕಟ್ಟೆಗೆ ಪರಿಚಯಿಸುವುದರ ಹಿಂದೆಯೂ ತನ್ನ ಗ್ರಾಹಕರ ಅನುಕೂಲವನ್ನೇ ಗಮನದಲ್ಲಿಟ್ಟುಕೊಂಡಿರುತ್ತದೆ. ಭಿನ್ನ ಗ್ರಾಹಕರೆಲ್ಲರೂ ಬಯಸುವಂತಹ ವೈವಿಧ್ಯಮಯ ಸೌಲಭ್ಯ, ಅತ್ಯಾಧುನಿಕ ತಂತ್ರಜ್ಞಾನ, ವಿಶೇಷ ವಿನ್ಯಾಸಗಳನ್ನು ತನ್ನ ಹೊಸ ವಾಹನಗಳಲ್ಲಿ ಅಳವಡಿಸಿಯೇ ಒದಗಿಸಲು ಕಂಪೆನಿ ಬಯಸುತ್ತದೆ. ಗ್ರಾಹಕರ ಬೇಡಿಕೆ ಈಡೇರಿಸುವುದೇ ಟಾಟಾ ಮೋಟಾಸರ್್ ಲಿ.ನ ಮುಖ್ಯ ಧ್ಯೇಯವಾಗಿದೆ ಎಂದು ಹೇಳಿದರು. ಈ ಮೊದಲು "ಹೊರೈಜೊನೆಕ್ಟ್ಸ್" ಪರಿಚಯಿಸಿದಾಗ ಹೊಂದಿದ್ದ ಕಾರ್ಯತಂತ್ರವನ್ನೇ ಈಗಲೂ ಮುಂದುವರಿಸಲಾಗಿದೆ. ಅದೇ ಕಾರ್ಯತಂತ್ರವನ್ನು ಈಗಲೂ ಮುಂದುವರಿಸಲಾಗಿದ್ದು, ಗ್ರಾಹಕರಿಗೆ ರೋಮಾಂಚನ ಉಂಟು ಮಾಡುವಂತಹ "ವಿಸ್ಟಾ ವಿಎಕ್ಸ್ ಟೆಕ್" ಮತ್ತು "ನ್ಯಾನೊ ಟ್ವಿಸ್ಟ್' ಕಾರುಗಳನ್ನು ಪರಿಚಯಿಸಲಾಗಿದೆ. ಈ ಎರಡೂ ಕಾರುಗಳು ಅದರದೇ ಶ್ರೇಣಿಯ ಕಾರುಗಳಲ್ಲಿಯೇ ಅತ್ಯಂತ ಶ್ರೇಷ್ಠ ಎನಿಸುವಂತಹ ಸೌಲಬ್ಯಗಳು ಮತ್ತು ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿವೆ. ಇಂತಹ ನಾವೀನ್ಯತೆಯ ಕಾರುಗಳನ್ನು ದೇಶದ ಮಾರುಕಟ್ಟೆಗೆ ಪರಿಚಯಿಸಲು ನಮಗೆ ಬಹಳ ಹೆಮ್ಮೆ ಎನಿಸುತ್ತದೆ ಎಂದು ಹೇಳಿದರು. ನೂತನ ವಿಸ್ಟಾ ವಿಎಕ್ಸ್ ಟೆಕ್: ರೋಮಾಂಚನಕಾರಿ ವಿನ್ಯಾಸ ವಿಸ್ಟಾ ಟೆಕ್ ಕಾರು, ಟಚ್ ಸ್ಕ್ರೀನ್ ಮಲ್ಟಿಮೀಡಿಯಾ ಸಿಸ್ಟೆಂ, ಜತೆಗೆ ಜಿಪಿಎಸ್ ನ್ಯಾವಿಗೇಷನ್, ಸುಲಭ ಚಾಲನೆ ತಂತ್ರಜ್ಞಾನ, ಚಾಲಕರಿಗೆ ಪ್ರಯಾಣದ ವೇಳೆ ಸಮಗ್ರ ಮಾಹಿತಿ ಒದಗಿಸುವ ವ್ಯವಸ್ಥೆ ಮೊದಲಾದ ಅತ್ಯಾಧುನಿಕ ತಂತ್ರಜ್ಞಾನದ ಸೌಲಭ್ಯಗಳನ್ನು ಒಳಗೊಂಡಿದೆ. ಅಷ್ಟೇ ಅಲ್ಲದೆ, ಮುಂಬದಿಯಲ್ಲಿ ಎರಡು ಬಗೆಯ ಸಸ್ಪೆನ್ಷನ್ಗಳಿವೆ. ಕಾರು ಚಾಲನೆ ಮಾಡುವವರಿಗೆ ರಸ್ತೆ ಮಾರ್ಗದ ದಿಕ್ಕು ತೋರುವಂತಹ ನೂತನ ಮಲ್ಟಿಮೀಡಿಯಾ ನ್ಯಾವಿಗೇಷನ್ ಸಿಸ್ಟೆಂ 6.5 ಇಂಚು ಅಳತೆಯ ಟಿಎಫ್ಟಿ ಸ್ಪರ್ಶಪರದೆಯಲ್ಲಿದೆ(ಟಚ್ಸ್ಕ್ರೀನ್). ಅಲ್ಲದೇ ಇದನ್ನು ಸ್ಟೀರಿಂಗ್ ವ್ಹೀಲ್ನಲ್ಲಿಯೇ ಒಳಗೊಂಡಿರುವ ಅತ್ಯಾಧುನಿಕ ವ್ಯವಸ್ಥೆಯ ಮೂಲಕವೇ ನಿಯಂತ್ರಿಸಬಹುದಾಗಿದೆ. ಮುಂಬದಿಯಲ್ಲಿ ಎರಡು ಬಗೆಯ ಸಸ್ಪೆನ್ಷನ್ಗಳಿರುವುದರಿಂದ ತಗ್ಗು ದಿಣ್ಣೆಗಳ ರಸ್ತೆಯಲ್ಲಿಯೂ ಕಾರು ಕುಲುಕಾಡದಂತೆ ದೃಢವಾಗಿ ಚಲಿಸುತ್ತದೆ. ಹೊಸದಾಗಿ ವಿನ್ಯಾಸಗೊಳಿಸಲಾದ ಕ್ಲಚ್ ಮಾಸ್ಟರ್ ಸಿಲಿಂಡರ್ ಅಳವಡಿಸಲಾಗಿದೆ. ನಗರದೊಳಗಾಗಲೀ, ದೂರದೂರಿನ ಪ್ರಯಾಣದಲ್ಲಾಗಲೀ ಪದೇ ಪದೇ ಕ್ಲಚ್ ಪೆಡಲ್ ಒತ್ತಬೇಕಾಗಿ ಬಂದಾಗ ಕಾಲಿನ ಮೇಲೆ ಉಂಟಾಗುವ ಒತ್ತಡವನ್ನು ಈ ಹೊಸ ಕ್ಲಚ್ ಮಾಸ್ಟರ್ ಸಿಲಿಂಡರ್ ಕನಿಷ್ಠ 2ರಿಂದ 3 ಕೆಜಿಗಳಷ್ಟು ತಗ್ಗಿಸುತ್ತದೆ. ಹಾಗಾಗಿ ನಗರ ಮತ್ತು ದೂರದ ಪಯಣ ಎರಡನ್ನೂ ಸುಖಕರ ಸಂಚಾರವಾಗಿಸುತ್ತದೆ. ಕಾರಿನ ಮೇಲ್ಭಾಗದಲ್ಲಿ ಅತ್ಯುತ್ತಮ ಗುಣಮಟ್ಟದ(ಸುಪೀರಿಯರ್) ಟೆಫ್ಲಾನ್ ಕೋಟಿಂಗ್ ಲೈನರ್ ಮಾಡಲಾಗಿರುವುದರಿಂದ ಕಾರಿನ ಮೇಲ್ಭಾಗ ಮತ್ತು ಒಳಭಾಗ ಎರಡೂ ಕಡೆ ತುಕ್ಕು ಹಿಡಿಯದಂತೆ ರಕ್ಷಿಸುತ್ತದೆ. ಅಲ್ಲದೆ, ಬಿರುಸಿನ ಮಳೆಗಾಲದಲ್ಲೂ ತೊಟ್ಟು ನೀರೂ ಕಾರಿನ ಒಳಭಾಗಕ್ಕೆ ಜಿನುಗದಂತೆ, ಧೂಳು ಒಳಸೇರದಂತೆ ಜಾಗ್ರತೆ ವಹಿಸುತ್ತದೆ. ವಿಸ್ಟಾ ಸರಣಿ ಕಾರುಗಳು, ಮೂರು ಮಾದರಿಗಳಲ್ಲಿ ಹಾಗೂ ಎರಡು ಡೀಸೆಲ್ ಎಂಜಿನ್ಗಳ ಆಯ್ಕೆಯಲ್ಲಿ ಲಭ್ಯವಿವೆ. ಇದರಲ್ಲಿ ವಿಎಕ್ಸ್ ಟೆಕ್ ಕಾರು ಕೇವಲ ಮಿತಸಂಖ್ಯೆಯಲ್ಲಷ್ಟೇ ಲಭ್ಯವಿದೆ. ಅಲ್ಲದೇ ಹೊಸಬಗೆಯ ವರ್ಣ ವಿನ್ಯಾಸದಲ್ಲಿ ವಿಸ್ಟಾ ಸರಣಿ ಲಭ್ಯವಿದೆ. ಬ್ಲ್ಯು ಚಿಲ್ ಬಣ್ಣದ್ದು ಹೊಸದಾಗಿ ಪರಿಚಯಿಸಿದ್ದಾಗಿದೆ. ವಿಸ್ಟಾ ಸರಣಿ ಕಾರುಗಳ ಬೆಲೆ ಕನಿಷ್ಠ ರೂ. 4.97 ಲಕ್ಷದಿಂದ ಗರಿಷ್ಠ 6.12 ಲಕ್ಷದವರೆಗೂ (ಬೆಂಗಳೂರಿನಲ್ಲಿ ಎಕ್ಸ್ಷೋರೂಂ ದರ) ಇದೆ. ವಿಸ್ಟಾ ಎಲ್ಎಸ್ ರೂ. 4.97 ಲಕ್ಷವಿದ್ದರೆ, ವಿಸ್ಟಾ ವಿಎಕ್ಸ್ ಟೆಕ್ ರೂ. 6.12 ಲಕ್ಷ ಬೆಲೆಯಲ್ಲಿದೆ. ಸ್ಮಾಟರ್್ ಸಿಟಿ ಕಾರ್: ನೂತನ ನ್ಯಾನೊ ಟ್ವಿಸ್ಟ್ ನೂತನ ನ್ಯಾನೊ ಟ್ವಿಸ್ಟ್ ಕಾರು, ಹೊಸ ವಿನ್ಯಾಸ ಮತ್ತು ವಿಶೇಷ ಸೌಲಭ್ಯಗಳನ್ನೊಳಗೊಂಡಿದ್ದು, ನ್ಯಾನೊ ಬ್ರಾಂಡ್ಗೆ ಭಿನ್ನವಾದ ವ್ಯಾಖ್ಯಾನ ನೀಡಿದೆ. ಈಗಿನ ಟ್ವಿಸ್ಟ್ ಕಾರು ನ್ಯಾನೊ ಸರಣಿಯ ಕಾರುಗಳ ಸಾಲಿಗೆ ಹೊಸ ಸೇರ್ಪಡೆಯಾಗಿದೆ. ಹೊಸ ಮಾದರಿ ನ್ಯಾನೊ ಟ್ವಿಸ್ಟ್ ಕಾರು, ನಗರದ ವಾಹನ ದಟ್ಟಣೆಯಲ್ಲಿ ಅಡೆತಡೆ ಇಲ್ಲದ ಪಯಣಕ್ಕೆ, ಸರಳ ಚಾಲನೆಗೆ, ಸುಲಭ ನಿಯಂತ್ರಣಕ್ಕೆ ಹೇಳಿಮಾಡಿಸಿದಂತಿದೆ. ಕಿರಿದಾದ ಸ್ಥಳದಲ್ಲಿಯೂ ವಾಹನ ನಿಲುಗಡೆ ಬಹಳ ಸಲೀಸು ಎನಿಸಲಿದೆ. ಇದಕ್ಕೆ ಪ್ರಥಮ ಶ್ರೇಣಿಯ ಎಲೆಕ್ಟ್ರಿಕ್ ಪವರ್ ಅಸಿಸ್ಟೆಡ್ ಸ್ಟೀರಿಂಗ್ (ಇಪಿಎಎಸ್) ಸೌಲಭ್ಯ ಇರುವುದೇ ಮುಖ್ಯ ಕಾರಣವಾಗಿದೆ. ಹೊಸ ಸಿಗ್ನೇಚರ್ ಮಾದರಿ ನ್ಯಾನೊ ಟ್ವಿಸ್ಟ್ ಗಾಢ ನೇರಳೆ ಬಣ್ಣ, ಜತೆಗೆ ಕ್ರೋಮ್ ಅಕ್ಸೆಂಟ್ಸ್, ಚಿತ್ತಾಕರ್ಷಕವಾದ ಒಳಾಂಗಣ ವಿನ್ಯಾಸವಿದೆ. ಆಸನಗಳಿಗೆ ಮತ್ತು ಕಾರಿನ ಒಳಗಿನ ಅಲಂಕಾರಕ್ಕೆ ಉತ್ತಮ ಗುಣಮಟ್ಟದ ವಸ್ತ್ರ ಬಳಸಲಾಗಿದೆ. ನೂತನ ನ್ಯಾನೊ ಟ್ವಿಸ್ಟ್ ಕಾರು ಎಕ್ಸ್ಟಿ ಮಾದರಿಯಲ್ಲಿ ಮಾತ್ರವೇ ಲಭ್ಯವಿದೆ. ಬೆಂಗಳೂರಿನಲ್ಲಿ ಎಕ್ಸ್ಷೋರೂಂ ಬೆಲೆ ರೂ. 2.48 ಲಕ್ಷ ಮಾತ್ರ. ಹೆಚ್ಚಿನ ಮಾಹಿತಿಯನ್ನು .. ವೆಬ್ಸೈಟ್ನಲ್ಲಿ ಪಡೆದುಕೊಳ್ಳಬಹುದು ಹಾಗೂ ಟ್ವೀಟರ್ ://./ ನಲ್ಲಿ ಅನುಸರಿಸಬಹುದು. ಹೆಚ್ಚಿನ ಸಂಪಾದಕೀಯ ಮಾಹಿತಿಗೆ: ಮಿನಾರಿ ಷಾ ಚೇತನ್ ಡಿ. ಕಂಪೆನಿ ಸಂಪರ್ಕ ಸಂವಹನ ವಿಭಾಗ ಈಡಲ್ಮನ್ ಟಾಟಾ ಮೋಟಾಸರ್್ ಬೆಂಗಳೂರು ದೂ: 02266657289 ಮೊ: 99720 66555 ಇ-ಮೇಲ್: ಟಟಿಚಿಡಿ@ಣಚಿಣಚಿಟಠಣಠಡಿ.ಛಿಠ