ಅಪಘಾತ ಪರೀಕ್ಷೆಯಲ್ಲಿ ಸ್ವಿಫ್ಟ್ ಮತ್ತು ಡ್ಯಾಟ್ ಸನ್ ಫೇಲ್ ಜಾಗತಿಕ ಎನ್ ಸಿ ಎ ಪಿ (ನ್ಯೂ ಕಾರ್ ಅಸೆಸ್ ಮೆಂಟ್ ಪ್ರೋಗ್ರಾಮ್) ನಡೆಸಿದ ಅಪಘಾತ ಪರೀಕ್ಷೆಯಲ್ಲಿ,... ನವದೆಹಲಿ: ಜಾಗತಿಕ ಎನ್ ಸಿ ಎ ಪಿ (ನ್ಯೂ ಕಾರ್ ಅಸೆಸ್ ಮೆಂಟ್ ಪ್ರೋಗ್ರಾಮ್) ನಡೆಸಿದ ಅಪಘಾತ ಪರೀಕ್ಷೆಯಲ್ಲಿ, ಭಾರತದಲ್ಲಿ ಹೆಚ್ಚು ಮಾರಾಟವಾಗುವ ಮಾರುತಿ-ಸುಜುಕಿ ಸಂಸ್ಥೆಯ ದುಬಾರಿ ಕಾರುಗಳಾದ ಸ್ವಿಫ್ಟ್ ಮತ್ತು ಡ್ಯಾತ್ ಸನ್ ದಯನೀಯವಾಗಿ ವಿಫಲವಾಗಿವೆ. ಜಾಗತಿಕ ಎನ್ ಸಿ ಎ ಪಿ - ಇಂಗ್ಲೆಂಡಿನ ಈ ಜಾಗತಿಕ ಚಾರಿಟಿ ಸ್ವಾವಲಂಬಿ ಸಂಸ್ಥೆ, ಬಳಕೆದಾರರ ಸುರಕ್ಷತಾ ಮಾಪನಕ್ಕಾಗಿ ಮಾಡುವ ಈ ಪರೀಕ್ಷೆಗಳಲ್ಲಿ, ಘಂಟೆಗೆ ೬೪ ಕಿ ಮೀ ಚಲಿಸುವ ಈ ಗಾಡಿಗಳೇನಾದರು ಮುಂಭಾಗದಲ್ಲಿ ಢಿಕ್ಕಿ ಹೊಡೆದರೆ, ಒಳಗೆ ಕುಳಿತಿರುವವರ ಸುರಕ್ಷತೆ "ಸೊನ್ನೆ" ಎಂದಿದೆ. ಸ್ವಿಫ್ಟ್ ನ ಎರಡು ಭಿನ್ನ ಮಾಡೆಲ್ ಗಳು ಈ ಪರೀಕ್ಷೆಗೆ ಒಳಪಟ್ಟಿದ್ದವು. ಒಂದು ಲ್ಯಾಟಿನ್ ಅಮೇರಿಕಾಗೆ ರಫ್ತಾಗುವ ಮಾಡೆಲ್ ಇನ್ನೊಂದು ಭಾರತದಲ್ಲಿ ಮಾರಾಟವಾಗುವ ಸ್ವಿಫ್ಟ್ ಮಾಡೆಲ್ . ಭಾರತದಲ್ಲಿ ಮಾರಾಟವಾಗುವ ಬಹುತೇಕ ಸಣ್ಣ ಕಾರುಗಳಾದ ಮಾರುತಿ ಆಲ್ಟೊ ೮೦೦, ಟಾಟಾ ನ್ಯಾನೋ, ಫೋರ್ಡ್ ಫಿಗೋ, ಹುಂಡೈ ಐ೧೦ ಮತ್ತು ವೋಕ್ಸ್ ವ್ಯಾಗನ್ ಪೋಲೊ ಕಾರುಗಳು ಕೂಡ ಜನವರಿಯಲ್ಲಿ ನಡೆದ ಈ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡಿವೆ ಮತ್ತು ಜಾಗತಿಕ ಎನ್ ಸಿ ಎ ಪಿ ಪ್ರಕಾರ ಈ ಕಾರುಗಳು ಅಪಘಾತದಲ್ಲಿ ಬಳಕೆದಾರರಿಗೆ ಜೀವ ಹೋಗುವಂತಹ ತೊಂದರೆಗಳಾಗಳಿವೆ ಎಂದಿದೆ. ಜಾಗತಿಕ ಎನ್ ಸಿ ಎ ಪಿ ಪ್ರಕಾರ ಭಾರತದಲ್ಲಿ ಮಾರಾಟವಾಗುವ ಹೊಸ ಕಾರುಗಳ ಸಂಖ್ಯೆಯಲ್ಲಿ ಮೇಲಿನ ಕಾರುಗಳ ಕಾರೋಬಾರು ೨೦%. ಇಂದು ಬಹುತೇಕ ರಾಷ್ಟ್ರಗಳಲ್ಲಿ ಅಂದರೆ ಆಸ್ಟ್ರೇಲಿಯಾ, ಜಪಾನ್, ಚೈನಾ, ಮಲೇಶಿಯಾ, ಯೂರೋಪಿಯನ್ ಸಂಘಟನೆ ಒಳಗೊಂಡಂತೆ ಮುಂತಾದ ದೇಶಗಳಲ್ಲಿ ಜಾರಿಗೆ ತಂದಿರುವ ಪ್ರಾಥಮಿಕ ಸುರಕ್ಷತೆಯ ಕ್ರಮಗಳು ಕೂಡ ಮೇಲಿನ ಕಾರುಗಳು ಒಳಗೊಂಡಿಲ್ಲ ಎಂದು ಜಾಗತಿಕ ಎನ್ ಸಿ ಎ ಪಿ ತಿಳಿಸಿದೆ.