ಬೆಂಝ್ ಜಿಎಲ್‌ಎ ಎಸ್‌ಯುವಿ ಮರ್ಸಿಡೆಸ್ ಬೆಂಝ್ ಕಂಪನಿಯ ಜಿಎಲ್‌ಎ ಎಸ್‌ಯುವಿಯ ಚಿತ್ರಗಳು ಹೊರಬಿದ್ದಿವೆ. ವಿಶೇಷ ಎಂದರೆ ಇದು ಮೊದಲ ನೋಟಕ್ಕೆ ಸ್ಪೋರ್ಟ್ಸ್ ಯುಟಿಲಿಟಿ ವಾಹನ ಎಂಬುದು ಗೊತ್ತಾಗುವಂತೆಯೇ ಇಲ್ಲ. ಮಾಮೂಲಿ ಕಾರಿನಂತೆಯೇ ಇದೆ. ಆದರೆ ಸಾಮಾನ್ಯ ಕಾರುಗಳಿಗಿಂತ ಕೊಂಚ ಉದ್ದ, ಸಪುರ ಹಾಗೂ ತಗ್ಗಾಗಿದೆ. ಓಡಿಸುವ ಅನುಭವ ಮಾತ್ರ ಇತರ ಎಸ್‌ಯುವಿಗಳಿಗಿಂತ ಘನವಾಗಿರುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.