ಸುಮ್ಕೆ ತಿಳ್ಕಂಡಿರಿ ಬೇಕಾಯ್ತದೆ ವಾಹನ ಪಾರ್ಕ್ ಮಾಡಲು ಅತ್ಯಂತ ದುಬಾರಿ ನಗರವೆಂದರೆ ಲಂಡನ್. ಲಂಡನ್ ಕೇಂದ್ರ ಭಾಗದಲ್ಲಿ ವಾಹನ ನಿಲ್ಲಿಸಬೇಕೆಂದರೆ ತಿಂಗಳಿಗೆ 578.87 ಪೌಂಡ್‌ನಷ್ಟು ಹಣ ತೆರಬೇಕಾಗಬಹುದು. ಇದರ ಜತೆಗೆ ಅಲ್ಲಿಗೆ ತಲುಪಲು ನೀವು ದಟ್ಟಣೆ ಶುಲ್ಕ ಬೇರೆ ತೆರಬೇಕು. ಅಲ್ಲಿ 2-3 ತಿಂಗಳ ಪಾರ್ಕಿಂಗ್ ವೆಚ್ಚದಲ್ಲಿ ನಮ್ಮ ದೇಶದಲ್ಲಿ ಒಂದು ಕಾರನ್ನೇ ಖರೀದಿಸಬಹುದು!