ಫೋರ್ಡ್ ಇಕೋಸ್ಪೋರ್ಟ್ ಅಂತೂ ಇಂತೂ ಫೋರ್ಡ್ ಇಕೋಸ್ಪೋರ್ಟ್ ಕಾರು ಜೂ.26ರಂದು ಮಾರುಕಟ್ಟೆಗೆ ಬರುತ್ತಿದೆ. 6 ತಿಂಗಳಿಂದ ಇಕೋಸ್ಪೋರ್ಟ್ ಎಸ್‌ಯುವಿ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಲೇ ಇವೆ. ಅನಿವಾರ್ಯ ಕಾರಣಗಳಿಂದ ಬಿಡುಗಡೆಯ ದಿನವನ್ನು ಫೋರ್ಡ್ ಕಂಪನಿ ಮುಂದೂಡುತ್ತಲೇ ಬರುತ್ತಿತ್ತು. ಆದರೆ ಅಂತಿಮವಾಗಿ ಮುಹೂರ್ತ ಫಿಕ್ಸ್ ಆಗಿದೆ. ರು. 50,000 ನೀಡಿ ಮುಂಗಡ ಬುಕಿಂಗ್‌ಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ಕಾರಿನ ದರವನ್ನು ಮಾತ್ರ ಇವತ್ತಿನವರೆಗೂ ನಿಗದಿಪಡಿಸಿಲ್ಲ. ಬಿಡುಗಡೆಯ ದಿನವೇ ಕಾರಿನ ದರವೂ ಘೋಷಣೆಯಾಗುವ ನಿರೀಕ್ಷೆಯಿದೆ.