ಡೀಸೆಲ್ ಹಾದಿಗೆ ಹೋಂಡಾ ಹೋಂಡಾ ಕಂಪನಿಯು ಡೀಸೆಲ್ ಹೊಂಡದಲ್ಲಿ ಬೀಳಲು ಹೊಸ ತಯಾರಿ ನಡೆಸಿದೆ! ಸಂಸ್ಥೆಯ ಪ್ರತಿಷ್ಠಿತ ಹೋಂಡಾ ಸಿಟಿ ಕಾರನ್ನು ಈಗ ಡೀಸೆಲ್ ಎಂಜಿನ್‌ನಲ್ಲಿ ಬಿಡಲಾಗುತ್ತಿದೆ. ನ.25ಕ್ಕೆ ಭಾರತದಲ್ಲಿ ಈ ಕಾರು ಅನಾವರಣಗೊಳ್ಳುತ್ತಿದ್ದು, ಜನವರಿಯಲ್ಲಿ ಮಾರುಕಟ್ಟೆಯಲ್ಲಿ ದೊರೆಯುವ ಸಾಧ್ಯತೆಯಿದೆ. ಹೋಂಡಾ ಅಮೇಝ್ ಕಾರನ್ನು ಡೀಸೆಲ್ ಎಂಜಿನ್‌ನಲ್ಲಿ ಬಿಟ್ಟಿರುವ ಪರಿಣಾಮದಿಂದ ಅಕ್ಟೋಬರ್ ತಿಂಗಳ ಮಾರಾಟದಲ್ಲಿ ಶೇ.30 ಏರಿಕೆ ಕಂಡಿದೆ. ಇದಲ್ಲದೇ ಡೀಸೆಲ್ ಕಾರುಗಳು ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿವೆ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ಆದರೆ, ಹೋಂಡಾ ಸಂಸ್ಥೆಗೆ ಈ ಸಂಬಂಧ ಎಚ್ಚರವಾಗಲು ಸುಮಾರು ಅರ್ಧ ದಶಕಗಳೇ ಬೇಕಾಯಿತು. 1.5 ಲೀ ಐ-ಡಿಟೆಕ್ ಎಂಜಿನ್ ಹಾಗೂ 110 ಪಿಎಸ್ ಸಾಮರ್ಥ್ಯವನ್ನು ಹೋಂಡಾ ಸಿಟಿಯಲ್ಲಿ ನೀಡಲಾಗಿದೆ. ಈ ಅರ್ಧ ದಶಕದಲ್ಲಿ ಮಾಡಿದ ತಪ್ಪನ್ನು ಇನ್ನಾದರೂ ತ್ವರಿತವಾಗಿ ಸುಧಾರಿಸಿಕೊಳ್ಳುವ ಉದ್ದೇಶದಿಂದ ಹೋಂಡಾ ಸಿಟಿಯನ್ನು ಡೀಸೆಲ್ ಮಾದರಿಯಲ್ಲಿ ಬಿಡಲಾಗುತ್ತಿದೆ. ಈಗಾಗಲೇ ಬುಕಿಂಗ್ ಪ್ರಾರಂಭವಾಗಿದೆ. ಪೆಟ್ರೋಲ್ ಮಾದರಿಗಿಂತ ರು. 80 ಸಾವಿರ ಹೆಚ್ಚಿರುವ ಸಾಧ್ಯತೆಯಿದೆ.