ಮುಂಬೈನಲ್ಲಿ ಕನ್ನಡಿಗನ ಕಲಾ ಪ್ರದರ್ಶನ ಕನ್ನಡದ ಕಲಾವಿದ ಪ್ರಭು ಹರಸೂರ್ ಅವರ ಬಣ್ಣದ ಕೈಚಳಕ ಮುಂಬೈ ಮಂದಿಗೂ ಗೊತ್ತಾಗಲಿದೆ. ಅವರ ಕಲಾ ಸರಣಿಯ ಕೃತಿಗಳು ಮುಂಬೈನ ಜಹಂಗೀರ್ ಆರ್ಟ್ ಗ್ಯಾಲರಿಯಲ್ಲಿ ಇದೇ ಡಿಸೆಂಬರ್ 19 ರಿಂದ 25 ರವರೆಗೆ ನಡೆಯಲಿವೆ. ಅಂದಹಾಗೆ ಇದು ಏಕವ್ಯಕ್ತಿ ಕಲಾ ಪ್ರದರ್ಶನ. ಅದಕ್ಕೆ 'ನನ್ನ ಪರಿಮಿತಿಯ ಅಪರಿಮಿತತೆ' (ಇನ್ ದ ಪ್ರಾಕ್ಸಿಮಿಟಿ) ಎಂಬ ಶೀರ್ಷಿಕೆಯನ್ನು ಹರಸೂರ್ ನೀಡಿದ್ದಾರೆ. ಹರಸೂರ್ ಅವರ ಬೇರು ಗುಲ್ಬರ್ಗ. ಆದರೆ ಅವರು ಕಲಾ ಹೆಮ್ಮರವಾಗಿ ಬೆಳೆದಿದ್ದು ತುಮಕೂರಿಗೆ ಬಂದು ನೆಲೆಸಿದ ಮೇಲೆಯೇ! ಇಲ್ಲಿನ ರವೀಂದ್ರ ಕಲಾನಿಕೇತನದಲ್ಲಿ ಹಿರಿಯ ಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಇವರು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕಲಾಪ್ರದರ್ಶನದಲ್ಲಿ ತಮ್ಮ ಕೃತಿಗಳನ್ನು ಪ್ರದರ್ಶಿಸಿದ್ದಾರೆ. ಹಲವು ಹತ್ತು ಸರಣಿ ಕಲಾಕೃತಿಗಳ ಪ್ರದರ್ಶನಗಳನ್ನು ಏಕವ್ಯಕ್ತಿಯಾಗಿಯೂ ಹಾಗೂ ಗುಂಪು ಪ್ರದರ್ಶನಗಳಲ್ಲಿಯೂ ಪ್ರದರ್ಶಿಸಿದ್ದಾರೆ. ಮುಂಬೈನ ಕಲಾ ರಸಿಕರು ಕೂಡ ಇವರ ಈ ಪ್ರದರ್ಶನವನ್ನು ನೋಡಿ ಮೆಚ್ಚಲಿ. ಸಂಪರ್ಕಿಸಿ: 09972645666