'ಅಚ್ಛೆ' ದಿನಗಳು ಬಂದವು ಆಟೋಮೊಬೈಲ್ ಉದ್ಯಮಕ್ಕೆ ಅಚ್ಚೆ ದಿನಗಳು ಬರುತ್ತಿವೆ. ವಾಹನ ಉದ್ಯಮ ಚಲಿಸಲು ಆರಂಭಿಸಿದೆ. ಭವಿಷ್ಯದಲ್ಲಿ ನಮಗೆ ಒಳ್ಳೆಯ ದಿನಗಳು ಬರಲಿವೆ ಎಂದು ಸ್ಯಾಮ್ ಕೂಡ ಹೇಳಿಕೊಂಡಿದೆ. ಆಗಸ್ಟ್ ತಿಂಗಳ ಮಾರಾಟದಲ್ಲಿ ಉದ್ಯಮವು ಶೇ.15ರಷ್ಟು ಬೆಳವಣಿಗೆ ಕಂಡಿದೆ. ಮಾರುತಿ ಸುಝುಕಿ, ಹೋಂಡಾ ಹಾಗೂ ಹುಂಡೈ ಕಂಪನಿಗಳು ಅನಿರೀಕ್ಷಿತ ಬೆಳವಣಿಗೆ ಸಾಧಿಸಿವೆ. ಮಾರುತಿ ಸಂಸ್ಥೆಯು ಕಳೆದ ಬಾರಿಗಿಂತ ಶೇ.29ರಷ್ಟು ಅಧಿಕ ಕಾರು ಮಾರಾಟ ಮಾಡಿದ್ದಾರೆ. ಹೋಂಡಾ ಕಂಪನಿ ಪ್ರಮಾಣ ಶೇ.33ನ್ನು ದಾಟಿದೆ. ಅದೇ ಹುಂಡೈ ಶೇ.19ರಷ್ಟು ಅಧಿಕ ವಾಹನಗಳನ್ನು ರಸ್ತೆಗಿಳಿಸಿದೆ. ಇದಾದ ಬಳಿಕ ಮತ್ತೆ ರಸ್ತೆಗೆ ಹುಂಡೈ ಎಲೈಟ್, ಪುಂಟೋ ಇವೋ, ಝೆಸ್ಟ್, ಮೊಬಿಲಿಯೋ ಗಾಡಿಗಳು ಮಾರುಕಟ್ಟೆಗೆ ಬಂದಿವೆ. ಶೀಘ್ರದಲ್ಲೇ ಹೋಂಡಾ ಹಾಗೂ ಟಾಟಾ ಕಂಪನಿಗಳು ಇನ್ನೆರಡು ಹೊಸ ಕಾರುಗಳನ್ನು ಮಾರುಕಟ್ಟೆಗೆ ತರಲಿವೆ. ಇದರ ಜತೆಗೆ ಪೆಟ್ರೋಲ್ ಬೆಲೆ ಕೂಡ ಇಳಿಕೆಯಾಗುತ್ತಿದೆ. ಇದರಿಂದ ವಾಹನೋದ್ಯಮ ಇನ್ನಷ್ಟು ಚೇತರಿಕೆ ಪಡೆಯುವ ಎಲ್ಲ ಲಕ್ಷಣ ಕಾಣಿಸುತ್ತಿದೆ. ಕಾಕತಾಳಿಯವೋ ಅಥವಾ ಸರ್ಕಾರದಲ್ಲಾದ ಬದಲಾವಣೆಯೋ ಗೊತ್ತಿಲ್ಲ ಉದ್ಯಮದ ಪಾಲಿಗಂತೂ ಅಚ್ಛೆ ದಿನಗಳು ಬರುತ್ತಿವೆ.