ವಿಶ್ವದ ಅತಿ ಎತ್ತರದ ದೇವಾಲಯ ಚಂದ್ರೋದಯ ಮಂದಿರ ವಿಶ್ವದಲ್ಲೇ ಅತಿ ಎತ್ತರದ ದೇವಾಲಯವಾಗಲಿರುವ 70 ಅಂತಸ್ತಿನ ಚಂದ್ರೋದಯ ಮಂದಿರವನ್ನು ಮಥುರಾದಲ್ಲಿ ನಿರ್ಮಿಸಲಾಗುತ್ತಿದೆ. ಮಥುರಾ: ವಿಶ್ವದಲ್ಲೇ ಅತಿ ಎತ್ತರದ ದೇವಾಲಯವಾಗಲಿರುವ 70 ಅಂತಸ್ತಿನ ಚಂದ್ರೋದಯ ಮಂದಿರವನ್ನು ಮಥುರಾದಲ್ಲಿ ನಿರ್ಮಿಸಲಾಗುತ್ತಿದೆ. ಈ ಯೋಜನೆಗೆ ಹೋಳಿ ಹಬ್ಬದಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಚಾಲನೆ ನೀಡಿದ್ದರು. ರು.300ಕೋಟಿಗಿಂತಲೂ ಅಧಿಕ ವೆಚ್ಚವಾಗಲಿರುವ ಈ ಯೋಜನೆಯನ್ನು ಐದು ವರ್ಷಗಳ ಒಳಗಾಗಿ ಮುಗಿಸುವ ಗುರಿಯನ್ನು ಇಸ್ಕಾನ್ ಇಟ್ಟುಕೊಂಡಿದೆ. ವೇದ ಪಠಣದ ಮಧ್ಯೆ ಅಕ್ಷಯಧಾಮ ಬೃಂದಾವನದಲ್ಲಿ 213 ಮೀ. ಎತ್ತರದ ಮಂದಿರದ ನಿರ್ಮಾಣ ಆರಂಭವಾಗಿದೆ. ಶ್ರೀಲ ಪ್ರಭುಪಾದಾ ಅವರ ಆಸೆ ನೆರವೇರಿಸಲು ವಾಸ್ತುವನ್ನು ಅಚ್ಚುಕಟ್ಟಾಗಿ ಪಾಲಿಸಿ ಈ ಮಂದಿರವನ್ನು ನಿರ್ಮಿಸಲಾಗುತ್ತಿದೆ. ಪ್ರಾಚೀನ ಪುಸ್ತಕಗಳಲ್ಲಿ ಕೃಷ್ಣನ ಕಾಲದ ಬೃಂದಾವನವನ್ನು ಯಾವ ರೀತಿ ವರ್ಣಿಸಲಾಗಿದೆಯೋ ಅದೇ ರೀತಿ ಮಂದಿರದ ನಿರ್ಮಾಣವಾಗಲಿದೆ. ಈ ಮಂದಿರ ಕೃಷ್ಣನ ಸಂದೇಶವನ್ನು ವಿಶ್ವಾದ್ಯಂತ ಸಾರಲಿದೆ ಎಂದು ಮಥುರಾದ ಸಂಸದೆ, ನಟಿ ಹೇಮಾಮಾಲಿನಿ ಅಭಿಪ್ರಾಯಪಟ್ಟಿದ್ದಾರೆ. ಕ್ಯಾಪ್ಸೂಲ್ ಎಲಿವೇಟರ್ ನೆರವಿನಿಂದ 700 ಅಡಿಯ ಮಂದಿರದ ಕೊನೆಯ ಅಂತಸ್ತಿಗೆ ಭಕ್ತರು ಹೋಗಿ ಬರಬಹುದಾಗಿದೆ. ಥೀಪಾರ್ಕ್ ಆಕರ್ಷಣೆಗಳು ಸಂಗೀತ ಕಾರಂಜಿ ಭಾಗವಂತ ಪ್ರವಚನ ಕೇಂದ್ರ ಯಮುನಾ ನದಿಯ ನೀರು ತುಂಬಿದ ಕೆರೆ ಬ್ರಿಜ್ ಪರಂಪರೆ ಬಿಂಬಿಸುವ ಗ್ರಾಮ ಗೋಶಾಲೆಗಳು ಚಂದ್ರೋದಯ ಮಂದಿರದ ವಿಶೇಷತೆಗಳು ಎತ್ತರ....700 ಅಡಿ (213 ಮೀ.) ಅಂತಸ್ತು...70 ವೆಚ್ಚ........ರು.300 ಕೋಟಿಗಳು ನಿರ್ಮಾಣದ ಅವಧಿ....5 ವರ್ಷಗಳು ಆಕರ್ಷಣೆ......ಕ್ಯಾಪ್ಸೂಲ್ ಎಲಿವೇಟರ್ ಥೀಂ ಪಾರ್ಕ್‌ನ ವ್ಯಾಪ್ತಿ....26 ಎಕರೆ