ವಜ್ರ ಧಾರೆ ಪ್ರಕೃತಿಯ ಸುಂದರವಾದ ಕಣ್ಮನ ಸೆಳೆಯುವ ಸೌಂದರ್ಯ ರಾಶಿಯನ್ನ್ನು ನೋಡಲು ಯಾರು ತಾನೇ ಇಷ್ಟ ಪಡುವುದಿಲ್ಲ? ಹೌದು, ಎಲ್ಲರೂ ಇದರ ಸೆಳತಕ್ಕೆ ಒಳಗಾಗಲು ರೆಡಿ.ಉತ್ತರ ಕನ್ನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿ ಹೆಸರುವಾಸಿಯಾದ ಮಾಗೋಡ ಫಾಲ್ಸ್, ಸಾತೊಡ್ಡಿ ಫಾಲ್ಸ್, ಶಿರ್ಲೆ ಫಾಲ್ಸ್... ಹೀಗೆ ಇವೆಲ್ಲ ಜನರಿಗೆ ಚಿರಪರಿಚಿತವಾದ ನೀರ ಝರಿಧಾರೆಗಳು. ಆದರೆ ಇನ್ನೊಂದು ಸುಂದರವಾದ ಕಣ್ಮನ ಸೆಳೆಯುವ ಕಲ್ಲು-ಬಂಡೆಗಳಿಂದ ಝಳಪಿಸುವ ಸುಂದರ ಝರಿಧಾರೆ ಇಲ್ಲಿದೆ. ವಜ್ರದಂತೆ ಕಂಗೊಳಿಸುವ, ಕಣ್ಣಕುಕ್ಕುವ ಜಲರಾಶಿಯ ಹೆಸರೇ 'ವಜ್ರಗುಂಡಿ ಫಾಲ್ಸ್‌'. ಅದೆಷ್ಟೋ ಜನರಿಗೆ ಇಂಥದ್ದೊಂದು ಫಾಲ್ಸ್ ಇದೆ ಎನ್ನುವುದೇ ತಿಳಿದಿಲ್ಲ. ಹೀಗೆ ಬನ್ನಿ... ಈ ಝರಿಧಾರೆ ಫಾಲ್ಸ್ ಯಲ್ಲಾಪುರ ತಾಲೂಕಿನ ಭಾಗಿನಕಟ್ಟದಲ್ಲಿದೆ. ಕಳಚೆ ಮಾರ್ಗವಾಗಿ ಹೋಗಿ ತೇಲಂಗಾರದಿಂದ ಸುಮಾರು 7 ಕಿ.ಮೀ. ಕ್ರಮಿಸಿದರೆ ಭಾಗಿನಕಟ್ಟ ಎನ್ನ್ನುವ ಪುಟ್ಟ, ಸುಂದರ ಊರು ಕಾಣಸಿಗುತ್ತದೆ. ಗದ್ದೆ, ತೋಟ, ಹಳ್ಳ, ದಿಣ್ಣೆಗಳ ದಾಟಿದರೆ ಸುಮಾರು 25 ಮನೆಗಳು ಕಾಣಸಿಗುತ್ತವೆ. ಇದು ಚಿಕ್ಕ ಊರಾದರೂ ಸಾಕಷ್ಟು ಸೌಂದರ್ಯ ತುಂಬಿಕೊಂಡಿದೆ. ಈ ಊರಿಗೆ ಬಂದು ತಲುಪಿ 'ವಜ್ರಗುಂಡಿ' ಫಾಲ್ಸ್ ಎಲ್ಲಿದೆ ಎಂದು ಕೇಳಿದರೆ ಸಾಕು ಕೈ ಮಾಡಿ ತೋರಿಸುತ್ತಾರೆ, ಇಲ್ಲ ಅವರೇ ನೇರವಾಗಿ ಕರೆದೊಯ್ಯುತ್ತಾರೆ. ವಾಹನ ಇಳಿದು 2 ಕಿ.ಮೀ. ಕಾಲ್ನಡಿಗೆಯಲ್ಲಿ ದೊಡ್ಡ ಹಳ್ಳದ ಗುಂಟ ನಡೆದರೆ ಸಾಕು ವಜ್ರಗುಂಡಿ ಫಾಲ್ಸ್‌ನ ದರ್ಶನವಾಗುತ್ತದೆ. ಮನಸೋಲುವ ಚಿತ್ತಾರ ಕಲ್ಲು-ಬಂಡೆಗಳ ನಡುವೆ ಜಿಗಿಯುತ್ತ, ಶುದ್ಧ ಸ್ವಚ್ಛವಾದ ನೀರನ್ನ್ನು ಕೈ, ಮೈಗೆ ಸೋಕಿಸಿಕೊಳ್ಳುತ್ತ ಹೋಗುವುದೇ ಆನಂದ. ಇದರ ಜತೆಗೆ ಸಾಕಷ್ಟು ಹೆಜ್ಜೇನುಗಳನ್ನೂ ನೋಡಬಹುದು. ಕಡಿದಾದ ದಾರಿಯಲ್ಲಿ ಸಾಗುವಾಗ ವಜ್ರಗುಂಡಿಯ ಪಕ್ಕದ ಕಲ್ಲುಗಳ ಮೇಲೆ ಜೇನುಗೂಡುಗಳ್ನ ನೋಡಿ ಆನಂದಿಸಬಹುದು. ಪ್ರಕೃತಿ ಸೌಂದರ್ಯದ ಮುಂದೆ ಯಾವ ಸೌಂದರ್ಯವೂ ಇಲ್ಲ ಎಂಬುದನ್ನ್ನು ನಮ್ಮ ಉತ್ತರ ಕನ್ನ್ನಡ ಜಿಲ್ಲೆಯ ಯಲ್ಲಾಪುರ ಸಾಬೀತಪಡಿಸುತ್ತಿದೆ. ಮನಸ್ಸಿಗೆ ಸಮಾಧಾನ ನೀಡುವ, ಆಹ್ಲಾದ ಕೊಡುವ ಈ ಸುಂದರವಾದ ಪ್ರಕೃತಿಯ ಮಡಿಲಿಗೆ ನೀವೊಮ್ಮೆ ಭೇಟಿ ನೀಡಿ... -ವಿನುತಾ ಹೆಗಡೆ @.