ಬಿಎಂಡಬ್ಲ್ಯೂ ಬ್ಲಂಡರ್ ಪ್ರತಿಷ್ಠಿತ ಬಿಎಂಡಬ್ಲ್ಯೂ ಸಂಸ್ಥೆ ಕೂಡ ಕಾರು ಉತ್ಪಾದನೆಯಲ್ಲಿ ತಪ್ಪೆಸಗುತ್ತದೆ. ಬಿಎಂಡಬ್ಲ್ಯೂ-3 ಮಾದರಿಯ 16 ಲಕ್ಷ ಕಾರುಗಳನ್ನು ಸಂಸ್ಥೆ ಹಿಂಪಡೆಯುತ್ತಿದೆ. ಈ ಕಾರುಗಳ ಏರ್‌ಬ್ಯಾಗ್‌ನಲ್ಲಿ ಕೆಲ ತೊಂದರೆ ಇರುವುದರಿಂದ ವಾಪಸ್ ಪಡೆಯಲಾಗುತ್ತಿದೆ. ಆದರೆ ಈ ಕಾರು ಉತ್ಪಾದನೆಯಾಗಿರುವುದು ಬರೋಬ್ಬರಿ 14 ವರ್ಷಗಳ ಹಿಂದೆ. 1999 ಹಾಗೂ 2000ರಲ್ಲಿ ಈ ಕಾರುಗಳನ್ನು ಉತ್ಪಾದಿಸಿ ಮಾರುಕಟ್ಟೆಗೆ ಬಿಡಲಾಗಿತ್ತು. ಫೋರ್ಡ್, ಹೋಂಡಾ, ನಿಸಾನ್ ಹಾಗೂ ಟೊಯೋಟಾ ಸಂಸ್ಥೆಯ ಕಾರುಗಳಲ್ಲೂ ಇತ್ತೀಚೆಗೆ ಇಂಥದ್ದೇ ಸಮಸ್ಯೆ ಎದುರಾಗಿತ್ತು.