ಯುಟಿಲಿಟಿ ಸೇಲ್ ಡೌನ್ ದೇಶದೊಳಗೆ ಕಾರುಗಳ ಮಾರಾಟ ಸಂಖ್ಯೆ ಜುಲೈಯಲ್ಲಿ ಶೇ. 7.4ರಷ್ಟು ಇಳಿಮುಖವಾಗಿತ್ತು. ಅಷ್ಟಕ್ಕೇ ಇಂಡಸ್ಟ್ರಿಯ ಮಂದಿ ಬೊಮ್ಮಡ ಬಜಾಯಿಸಿಕೊಂಡಿದ್ದರು. ಅದಕ್ಕೆ ಕಾರಣಗಳೂ ಇದೆಯೆನ್ನಿ- ಇಂಧನ ಬೆಲೆಯಲ್ಲಿ ಸಿಕ್ಕಾಪಟ್ಟೆ ಏರಿಕೆ, ಬಡ್ಡಿದರಗಳ ಹೆಚ್ಚಳ ಇತ್ಯಾದಿ. ಈಗ ಈ ಇಳಿಯುವಿಕೆ ವ್ಯಾನ್‌ನಂತಹ ಯುಟಿಲಿಟಿ ವಾಹನಗಳಿಗೂ ಹಬ್ಬಿದೆ. ಈ ಇಳಿತದ ರೇಟು ಶೇ. 17.5. ಇದರಿಂದ ಇನ್ನಷ್ಟು ಬೆದರಿರುವ ಉದ್ಯಮದ ಜನ, ಸರ್ಕಾರದ ನೆರವಿಗೆ ಬೇಡಿಕೆ ಇಟ್ಟಿದ್ದಾರೆ.