ಟಿವಿಎಸ್ ಆದಾಯ ಹೆಚ್ಚಳ ಭಾರತೀಯ ಮೊಟಾರ್ ತಯಾರಕ ಕಂಪನಿಯಾದ ಟಿವಿಎಸ್ ಕಳೆದ ಆರ್ಥಿಕ ವರ್ಷದಲ್ಲಿ ಬೈಕ್‌ಗಳ ಮಾರಾಟದಲ್ಲಿ.. ಭಾರತೀಯ ಮೊಟಾರ್ ತಯಾರಕ ಕಂಪನಿಯಾದ ಟಿವಿಎಸ್ ಕಳೆದ ಆರ್ಥಿಕ ವರ್ಷದಲ್ಲಿ ಬೈಕ್‌ಗಳ ಮಾರಾಟದಲ್ಲಿ ಕುಸಿತವಾಗಿದ್ದರೂ ಆದಾಯದಲ್ಲಿ ಶೇ.11ರಷ್ಟು ಏರಿಕೆಯಾಗಿದೆ. ಭಾರತದ 4ನೇ ಅತಿದೊಡ್ಡ ಬೈಕ್ ತಯಾರಕ ಕಂಪನಿಯಾದ ಟಿವಿಎಸ್, 2013-14ನೇ ಆರ್ಥಿಕ ವರ್ಷದಲ್ಲಿ 19.93 ಲಕ್ಷ ಬೈಕ್‌ಗಳನ್ನು ಮಾರಾಟಮಾಡಿದೆ. ಒಟ್ಟು ಆದಾಯ ಪ್ರಮಾಣವು ರು. 7169 ಕೋಟಿಯಿಂದ ರು. 7962 ಕೋಟಿಗೆ ಏರಿದೆ. ಇದಲ್ಲದೇ ಸಂಸ್ಥೆಯ ನಿವ್ವಳ ಲಾಭದಲ್ಲೂ ಶೇ.262ರಷ್ಟು ಹೆಚ್ಚಾಗಿದ್ದು ರು. 262 ಕೋಟಿಗೆ ತಲುಪಿದೆ. ಹಿಂದಿನ ಆರ್ಥಿಕ ವರ್ಷದಲ್ಲಿ ಲಾಭ ಪ್ರಮಾಣವು ರು. 116 ಕೋಟಿಯಷ್ಟಾಗಿತ್ತು. ಕಳೆದ ಆರ್ಥಿಕ ವರ್ಷದ ಕೊನೆಯ ತ್ರೈಮಾಸಿಕದಲ್ಲೂ ಶೇ.21ರಷ್ಟು ಆದಾಯ ಏರಿಕೆಯಾಗಿದ್ದು ಒಟ್ಟಾರೆ ಲಾಭವೂ 52 ಕೋಟಿಯಷ್ಟಾಗಿದೆ. ಇದಕ್ಕೂ ಹಿಂದಿನ ಆರ್ಥಿಕ ಸಾಲಿನ ಇದೇ ತ್ರೈಮಾಸಿಕದಲ್ಲಿ ಸಂಸ್ಥೆಯು ಆರ್ಥಿಕ ಸಂಕಷ್ಟದಲ್ಲಿತ್ತು.