ಇಂಡೋನೇಶಿಯಾ ಮಾರುಕಟ್ಟೆಗೆ ಲಗ್ಗೆ ಇಟ್ಟ ರಾಯಲ್ ಎನ್ಫೀಲ್ಡ್ ಐಚರ್ ಮೋಟಾರ್ಸ್ ಲಿಮಿಟೆಡ್ ನ ದ್ವಿಚಕ್ರ ವಾಹನ ಅಂಗವಾದ ರಾಯಲ್ ಎನ್ಫೀಲ್ಡ್ ತನ್ನ ಜಾಗತಿಕ ವಿಸ್ತರಣೆಯ ಅಂಗವಾಗಿ ೨೫೦ -೭೫೦ ಸಿಸಿ ವಿಭಾಗದಲ್ಲಿ ಇಂಡೋನೇಶಿಯಾ ಚೆನ್ನೈ: ಐಚರ್ ಮೋಟಾರ್ಸ್ ಲಿಮಿಟೆಡ್ ನ ದ್ವಿಚಕ್ರ ವಾಹನ ಅಂಗವಾದ ರಾಯಲ್ ಎನ್ಫೀಲ್ಡ್ ತನ್ನ ಜಾಗತಿಕ ವಿಸ್ತರಣೆಯ ಅಂಗವಾಗಿ ೨೫೦ -೭೫೦ ಸಿಸಿ ವಿಭಾಗದಲ್ಲಿ ಇಂಡೋನೇಶಿಯಾ ಮಾರುಕಟ್ಟೆಯನ್ನು ಪ್ರವೇಶಿಸಲಿದೆ ಎಂದು ಸೋಮವಾರ ಘೋಷಿಸಿದೆ. ಸಂಸ್ಥೆಯೇ ತಿಳಿಸಿರುವ ಪ್ರಕಾರ ದ್ವಿಚಕ್ರ ವಾಹನಗಳಿಗೆ ಇಂಡೋನೇಶಿಯಾ ವಿಶ್ವದ ಎರಡನೇ ಅತಿ ದೊಡ್ಡ ಮಾರುಕಟ್ಟೆ ಹೊಂದಿದೆ. ಜಕಾರ್ತಾದಲ್ಲಿ ಏಕಮಾತ್ರ ವಿತರಕರಾಗಿ ತಮ್ಮ ಸಂಸ್ಥೆಯ ಜೊತೆ ಒಪ್ಪಂದ ಮಾಡಿಕೊಂಡಿರುವ ಪಿಟಿ ಮೋಟಾರ್ಸ್ ಜೊತೆಗೂಡಿ ರಿಟೇಲ್ ಮಾರಾಟ ಪ್ರಾರಂಭಿಸುವುದಾಗಿ ಹೇಳಿಕೆಯಲ್ಲಿ ತಿಳಿಸಿದೆ. ಈ ದ್ವಿಚಕ್ರ ವಾಹನ ಅಂಗಡಿಯ ಜೊತೆಗೆ ರಾಯಲ್ ಎನ್ಫೀಲ್ಡ್ ಸೇವಾ ಸಂಸ್ಥೆಯನ್ನು ಪ್ರಾರಂಭಿಸುವುದಾಗಿ ಸಂಸ್ಥೆ ತಿಳಿಸಿದೆ.