ಜರ್ನಿ ಪ್ರವಾಸಗಳನ್ನು ಸಾಧ್ಯವಾದಷ್ಟು ಮುಂಚಿತವಾಗಿ ಯೋಜಿಸಿಕೊಳ್ಳಿ. ಪ್ರಯಾಣದ ದಿನಾಂಕ ನಿರ್ಧಾರವಾದ ತಕ್ಷಣ ಟಿಕೆಟ್ ಬುಕ್ ಮಾಡಿಸಿಕೊಳ್ಳಿ. ಇದರಿಂದ ಟಿಕೆಟ್ ಸಿಗದೆ ಪ್ರವಾಸ ರದ್ದುಪಡಿಸಬೇಕಾದ ಅಥವಾ ಯೋಜನೆಯನ್ನೇ ಬದಲಿಸಬೇಕಾದ ಪ್ರಮೇಯ ಉಂಟಾಗುವುದಿಲ್ಲ. ಇದು ಆನ್‌ಲೈನ್ ಯುಗ. ಹೋಟೆಲ್‌ಗಳನ್ನು ಆನ್‌ಲೈನ್‌ನಲ್ಲಿಯೇ ಬುಕ್ ಮಾಡಿಕೊಳ್ಳಬಹುದು. ನಿಮ್ಮ ಕೈಗೆಟುಕುವ ದರದ ಹೋಟೆಲ್‌ಗಳ ಪಟ್ಟಿಯೇ ಆನ್‌ಲೈನ್‌ನಲ್ಲಿ ಸಿಗುತ್ತದೆ. ರೇಟಿಂಗ್ ಕೂಡ ಅಲ್ಲಿಯೇ ಲಭ್ಯ. ಗುಣಮಟ್ಟ, ದರ ಎಲ್ಲವನ್ನೂ ಕುಳಿತಲ್ಲಿಯೇ ನಿರ್ಧರಿಸಿಕೊಳ್ಳಬಹುದು. ಎಲ್ಲಿಗೇ ಹೋದರೂ ನೀರು ಮತ್ತು ಆಹಾರದ ವಿಚಾರದಲ್ಲಿ ಎಷ್ಟು ಸಾಧ್ಯವೋ ಅಷ್ಟು ಎಚ್ಚರವಹಿಸಿ. ಬಾಯಾರಿಕೆ ನೀಗಿಸಿಕೊಳ್ಳಲು ಚಾಕೊಲೆಟ್ ಅಥವಾ ಪೆಪ್ಪರ್‌ಮಿಂಟ್ ಇಟ್ಟುಕೊಳ್ಳಿ.