ಮಾರುತಿ, ಸ್ವಿಫ್ಟಾಗಿ ಏರುತಿದೆ ನಿನ್ನ ಕೀರುತಿ! ಮಾರುತಿ ಸುಜುಕಿ ಸ್ವಿಫ್ಟ್ ಕಾರು ವಿಶ್ವದಾದ್ಯಂತ ಸ್ವಿಫ್ಟಾಗಿ (ವೇಗವಾಗಿ) ಜನಪ್ರಿಯವಾಗುತ್ತಿದೆ. ಕೇವಲ ಭಾರತದಲ್ಲೊಂದೇ ಅಲ್ಲ, ವಿಶ್ವದಾದ್ಯಂತ 30 ಲಕ್ಷ ಸ್ವಿಫ್ಟ್ ಕಾರುಗಳು ಮಾರಾಟವಾಗಿದೆ. ಈ ಮೂಲಕ ವಿಶ್ವದಲ್ಲೇ ಅತ್ಯಂತ ಹೆಚ್ಚು ಮಾರಾಟವಾಗಿರುವ ಸಣ್ಣ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸದ್ಯದಲ್ಲಿ ಈ ಸ್ಥಾನಬಿಟ್ಟುಕೊಡುವ ಲಕ್ಷಣಗಳೂ ಕಾಣುತ್ತಿಲ್ಲ. ಸ್ವಿಫ್ಟ್ ಮಾರುಕಟ್ಟೆಗೆ ಬಂದು 8 ವರ್ಷಗಳಲ್ಲಿ ಈ ಸಾಧನೆ ಮಾಡಿದೆ. ಜಪಾನ್‌ನಲ್ಲಿ ಆರಂಭಗೊಂಡ ಸ್ವಿಫ್ಟ್ ಭಾರತದಲ್ಲಿ ಅತಂಯತ ಜನಪ್ರಿಯವಾಯಿತು. ಈಗ 120 ದೇಶಗಳಲ್ಲಿ ಸ್ವಿಫ್ಟ್ ತನ್ನ ಅಸ್ತಿತ್ವಹೊಂದಿದೆ. ಇದರ ಒಟ್ಟು ಮಾರಾಟದಲ್ಲಿ ಭಾರತದ ಪಾಲು ಶೇ.45ರಷ್ಟು. ಅಂದರೆ ಭಾರತದಲ್ಲಿ ಈ ಕಾರು ಎಷ್ಟು ಜನಪ್ರಿಯ ಎಂಬುದು ಅರ್ಥವಾಗುತ್ತದೆ. ಮಾರುತಿ ಕಂಪನಿಯ ಏಳ್ಗೆಯಲ್ಲೂ ಈ ಕಾರಿನ ಪಾತ್ರ ಮಹತ್ವದ್ದು ಎಂಬುದು ಇದರಿಂದ ಅರಿವಾಗುತ್ತದೆ. ಹೊಸ ಮಾದರಿಯ ಸ್ವಿಫ್ಟ್ ಇನ್ನಷ್ಟು ಗ್ರಾಹಕರನ್ನು ಆಕರ್ಷಿಸಲು ಸಹಾಯವಾಗಿದೆ.