ಸ್ಟಾರ್ ಸಿಟಿ ಪ್ಲಸ್ ಪಾಯಿಂಟ್ ಸಿಟಿ ರೋಡಲ್ಲಿನ್ನು ಸ್ಟಾರ್‌ಸಿಟಿ ಪ್ಲಸ್‌ನ ಸದ್ದು. ಹೊಚ್ಚ ಹೊಸ ವಿನ್ಯಾಸ, ಉತ್ತಮ ಕಾರ್ಯನಿರ್ವಹಣೆ, ಮೈಲೇಜ್‌ಗೆ ಸದಾ ಒತ್ತು ನೀಡುವ ಟಿವಿಎಸ್ ಸಂಸ್ಥೆ ನೂತನವಾಗಿ 'ಸ್ಟಾರ್ ಸಿಟಿ ಪ್ಲಸ್‌' ಬೈಕ್ ಅನ್ನು ಬಿಡುಗಡೆಗೊಳಿಸಿದೆ. 110ಸಿಸಿ ಸಾಮರ್ಥ್ಯದ ಎಕೋಥ್ರಸ್ಟ್ ಎಂಜಿನ್‌ನ ನಯವಾದ ಕಾರ್ಯನಿರ್ವಹಣೆ, ಸಾಮರ್ಥ್ಯ, ಇಂಧನ ದಕ್ಷತೆ ಮತ್ತು ಉತ್ತಮ ಪಿಕ್‌ಅಪ್ ಟಿವಿಎಸ್‌ನ ಸ್ಟಾರ್ ಸಿಟಿ ಪ್ಲಸ್‌ನ ಸ್ಪೆಷಾಲಿಟಿ. 'ಅಲಾಯ್ ವೀಲ್, 3ಡಿ ಎಂಬ್ಲಮ್, ಮಿನುಗುವ ಹಿಂಬದಿ ದೀಪ ಮೋಟಾರ್ ಸೈಕಲ್‌ನ ಮೆರುಗನ್ನು ಇನ್ನಷ್ಟು ಹೆಚ್ಚಿಸಿದೆ' ಅಂತಾರೆ ಮಾರಾಟ ವಿಭಾಗದ ಮುಖ್ಯಸ್ಥ ಜೆ.ಎಸ್. ಶ್ರೀನಿವಾಸನ್. ಕೆಂಪು, ನೀಲಿ, ಕಪ್ಪು ಮತ್ತು ಬೂದು ಬಣ್ಣದಲ್ಲಿ ದೊರೆಯಲಿದ್ದು ಲೀಟರ್ ಪೆಟ್ರೋಲ್‌ಗೆ 86 ಕಿ.ಮೀ. ಕ್ರಮಿಸಬಹುದಾಗಿದೆ. ಸ್ವಯಂಚಾಲಿತ ಮತ್ತು ಸಾಧಾರಣ ಎಂಬ ಎರಡು ವಿಭಿನ್ನ ಬಗೆಯಲ್ಲಿ ಬೈಕನ್ನು ವಿನ್ಯಾಸ ಮಾಡಲಾಗಿದೆ. ಶೋರೂಂನ ಬೆಲೆ ರು. 42,444 ರಿಂದ ಆರಂಭವಾಗಲಿದೆ. ಮೊದಲ ಹಂತದಲ್ಲಿ10 ಸಾವಿರ ಬೈಕ್ ಉತ್ಪಾದಿಸಿದ್ದು ಬೇಡಿಕೆಗೆ ತಕ್ಕಂತೆ ಉತ್ಪಾದನೆಯನ್ನು ಹೆಚ್ಚು ಮಾಡಲಾಗುತ್ತದೆ.