ನಮ್ಮೂರ ಕುರಿತು ತಿಳ್ಕೊಂಡಿರಿ ಕರ್ನಾಟಕ ಏಕೀಕರಣವಾದದ್ದು 1956ರ ನವೆಂಬರ್ 1ರಂದು. ಆದರೆ ಕರ್ನಾಟಕ ಎನ್ನುವ ನಾಮಕರಣವಾದದ್ದು ಮಾತ್ರ 1973ರಲ್ಲಿ. ಅಲ್ಲಿಯವರೆಗೆ ಮೈಸೂರು ರಾಜ್ಯ ಎಂದೇ ಕರೆಯಲಾಗುತ್ತಿತ್ತು. ಭೌಗೋಳಿಕ ವಿಸ್ತೀರ್ಣದಲ್ಲಿ (1,91,976 ಚ.ಕಿ.ಮೀ) ಕರ್ನಾಟಕ ದೇಶದ ಎಂಟನೇ ದೊಡ್ಡ ರಾಜ್ಯ. 2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ 6,11,30,704 ಜನವಸತಿ ಪ್ರದೇಶಗಳಿವೆ. ಕರ್ನಾಟಕದ ಜನಸಂಖ್ಯೆಯ ಶೇ 56ರಷ್ಟು ಜನ ಈಗಲೂ ಅವಲಂಬಿಸಿರುವುದು ಕೃಷಿಯನ್ನೇ. 12.31 ದಶಲಕ್ಷ ಹೆಕ್ಟೇರ್‌ನಲ್ಲಿ ಸಾಗುವಳಿ ಮಾಡಲಾಗುತ್ತದೆ. ಇದು ರಾದ್ಯದ ಒಟ್ಟೂ ಭೂಪ್ರದೇಶದ ಶೇ 64.6ರಷ್ಟಾಗುತ್ತದೆ. ಕರ್ನಾಟಕ ಮತ್ತು ಹಿಂದೂಸ್ತಾನಿ ಎರಡೂ ಸಂಗೀತ ಪ್ರಕಾರಗಳಲ್ಲಿ ಖ್ಯಾತ ಕಲಾವಿದರನ್ನು ನೀಡಿದ, ನೀಡುತ್ತಿರುವ ರಾಜ್ಯ ಕರ್ನಾಟಕ.