ಈಟಿಯೋಸ್ ಕ್ರಾಸ್ ಈಟಿಯೋಸ್ ಲಿವಾ ಕಾರಿಗೆ ಸ್ಟೋರ್ಟಿ ಲುಕ್ ನೀಡಿರುವ ಟೊಯೋಟಾ ಸಂಸ್ಥೆಯು ಈಟಿಯೋಸ್ ಕ್ರಾಸ್ ಕಾರನ್ನು ಮಾರುಕಟ್ಟೆಗೆ ತಂದಿದೆ. ಕಳೆದ ಎಕ್ಸ್‌ಪೋದಲ್ಲಿ ಬಿಡುಗಡೆಯಾಗಿದ್ದ ಕಾರನ್ನು ಈಗ ಮಾರುಕಟ್ಟೆಗೆ ಬಿಡಲಾಗುತ್ತಿದ್ದು, ಪೆಟ್ರೋಲ್ ಹಾಗೂ ಡೀಸೆಲ್‌ನಲ್ಲಿ ತಲಾ 2 ಮಾದರಿ ಲಭ್ಯವಿದೆ. ಗಾಡಿಯ ಎಂಜಿನ್ ಹಾಗೂ ಬಹುತೇಕ ಭಾಗಗಳು ಈಟಿಯೋಸ್ ಲಿವಾದ್ದೆ ಆಗಿದೆ. ಆದರೆ ಗಾಡಿಯ ಕೆಳಭಾಗದಲ್ಲಿ ಕಪ್ಪು ಬಣ್ಣದ ಒಂದು ಪ್ಲಾಸ್ಟಿಕ್ ಪಟ್ಟಿ ನೀಡಲಾಗಿದ್ದು, ಇದು ಗಾಡಿಯ ವಿನ್ಯಾಸವನ್ನೇ ಬದಲಿಸಿದೆ. ಈ ಬದಲಾವಣೆಯು ಗಾಡಿಗೆ ಸ್ಪೋರ್ಟಿ ಲುಕ್ ನೀಡಿದೆ. ಇದಲ್ಲದೇ ರೂಫ್‌ರೇಲ್ ಹಾಗೂ ಫ್ರಂಟ್ ಗ್ರಿಲ್ ಬದಲಿಸಲಾಗಿದೆ. ಪೆಟ್ರೋಲ್‌ನಲ್ಲಿ 1.2 ಲೀ., 1.5 ಲೀ. ಹಾಗೂ ಡೀಸೆಲ್‌ನಲ್ಲಿ 1.4 ಲೀ. ಎಂಜಿನ್ ಲಭ್ಯವಿದೆ. ಕಾರಿನ ದೆಹಲಿಯ ಎಕ್ಸ್ ಶೋರೂಮ್ ದರವು ರು. 5.76 ಲಕ್ಷದಿಂದ ರು. 7.40 ಲಕ್ಷದವರೆಗಿದೆ.