ಮಹೀಂದ್ರಾ ಮೋಜೋ ಬೈಕ್ ಬುಕ್ಕಿಂಗ್ ಶುರು ಮಹೀಂದ್ರಾ ಕಂಪೆನಿಯ ನೂತನ ಬೈಕ್ ಮೋಜೋ ಮಾರುಕಟ್ಟೆಗೆ ಲಗ್ಗೆ ಇಡಲು ಸಿದ್ಥತೆ ನಡೆಸಿದೆ. ಬಹು ನಿರೀಕ್ಷಿತ ಬೈಕ್ ಆಗಿರುವ... ಮಹೀಂದ್ರಾ ಕಂಪೆನಿಯ ನೂತನ ಬೈಕ್ ಮೋಜೋ ಮಾರುಕಟ್ಟೆಗೆ ಲಗ್ಗೆ ಇಡಲು ಸಿದ್ಥತೆ ನಡೆಸಿದೆ. ಬಹು ನಿರೀಕ್ಷಿತ ಬೈಕ್ ಆಗಿರುವ ಮೋಜೋದ ಟೆಸ್ಟ್ ಡ್ರೈವ್ ವೀಡಿಯೋ ಕೆಲ ದಿನಗಳ ಹಿಂದೆ ಯೂಟ್ಯೂಬ್‌ನಲ್ಲಿ ಕಾಣಿಸಿಕೊಂಡು ಆಮೇಲೆ ಅಪ್ರತ್ಯಕ್ಷವಾಗಿದೆ. ಇದೀಗ ಬೈಕ್ ಪ್ರೇಮಿಗಳು ನಿರೀಕ್ಷೆಯಲ್ಲಿದ್ದ ಮೋಜೋದ ಬುಕ್ಕಿಂಗ್ ಮಹೀಂದ್ರಾ ಡೀಲರ್‌ಶಿಪ್‌ಗಳಲ್ಲಿ ಶುರುವಾಗಿದ್ದು 10,000 ರು. ಮುಂಗಡ ಹಣ ನೀಡಿ ಬುಕ್ಕಿಂಗ್ ಮಾಡಬಹುದಾಗಿದೆ. ಬಹುತೇಕ ಸೆಪ್ಟೆಂಬರ್ ತಿಂಗಳಾಂತ್ಯದಲ್ಲಿ ಅಥವಾ ಅಕ್ಟೋಬರ್ ತಿಂಗಳ ಆದಿಯಲ್ಲಿ ಪ್ರಸ್ತುತ ಬೈಕ್ ಮಾರುಕಟ್ಟೆಗೆ ಬರಲಿದೆ. ಮಹೀಂದ್ರಾದ ಹೊಸ 300 ಸಿಸಿ ಇಂಜಿನ್, ಸಿಂಗಲ್ ಸಿಲಿಂಡರ್, ಫ್ಯೂಯೆಲ್ ಇಂಜಕ್ಟೆಡ್ ಇಂಜಿನ್ ಗರಿಷ್ಠ 32 ಬಿಹೆಚ್‌ಪಿವರೆಗೆ ಸಾಮರ್ಥ್ಯ ಕಲ್ಪಿಸಲಿದೆ. ಹೊಸ ಇಂಜಿನ್‌ನೊಂದಿಗೆ ಎಲ್‌ಇಡಿ ಪೈಲೆಟ್ ಲ್ಯಾಂಪ್, ಕೆಟಿಎಂ ಬೈಕ್‌ಗಳಂತಿರುವ ಮೂರು ಸಸ್ಪೆನ್ಷನ್, ಮುಂದೆ ಪೆಟಲ್ ಡಿಸ್ಕ್ ಬ್ರೇಕ್, ಮಲ್ಟಿ ಫಂಕ್ಷನ್ ಇನ್‌ಸ್ಟ್ರಮೆಂಟ್ ಕ್ಲಸ್ಟರ್ ಮೊದಲಾದವು ಮೋಜೋ ಬೈಕ್ ನ ವಿಶೇಷತೆ. ಇಂಧನ ಸಾಮರ್ಥ್ಯದ ಬಗ್ಗೆ ಸದ್ಯ ಯಾವುದೇ ಮಾಹಿತಿ ದೊರೆತಿಲ್ಲದೇ ಇದ್ದರೂ 20 ಲೀಟರ್ ಶೇಖರಣಾ ಶಕ್ತಿಯುಳ್ಳ ಟ್ಯಾಂಕ್ ಇದರಲ್ಲಿದೆ ಎಂದು ಹೇಳಲಾಗುತ್ತಿದೆ.